ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಮಾಕ್ರಟಿಕ್‌ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ₹ 73 ಕೋಟಿ ನಿಧಿ ಸಂಗ್ರಹ

ಇಂಡಿಯನ್‌–ಅಮೆರಿಕನ್ ಅಡ್ವೊಕಸಿ ಆ್ಯಂಡ್‌ ಪೊಲಿಟಿಕಲ್‌ ಆ್ಯಕ್ಷನ್ ಕಮಿಟಿ ಕಾರ್ಯ
Last Updated 20 ಅಕ್ಟೋಬರ್ 2020, 8:42 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಡೆಮಾಕ್ರಟಿಕ್‌ ಪಕ್ಷದಿಂದ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿರುವ ಜೋ ಬೈಡನ್‌, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ₹ 73 ಕೋಟಿ (10 ದಶಲಕ್ಷ ಡಾಲರ್‌) ನಿಧಿ ಸಂಗ್ರಹಿಸಲಾಗಿದೆ ಎಂದು ಇಂಡಿಯನ್‌–ಅಮೆರಿಕನ್ ಅಡ್ವೊಕಸಿ ಆ್ಯಂಡ್‌ ಪೊಲಿಟಿಕಲ್‌ ಆ್ಯಕ್ಷನ್ ಕಮಿಟಿ ತಿಳಿಸಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ನಿಧಿಯನ್ನು ಸಂಗ್ರಹಿಸಲಾಗಿದೆ ಎಂದೂ ಸಮಿತಿ ಹೇಳಿದೆ.

‘ಭಾರತ ಮೂಲದ ಅಮೆರಿಕನ್ನರನ್ನು ಒಳಗೊಂಡ ರಾಜಕೀಯ ಕ್ರಿಯಾ ಸಮಿತಿಯೊಂದು ಈ ವರೆಗೆ ಸಂಗ್ರಹಿಸಿದ ಗರಿಷ್ಠ ಮೊತ್ತ ಇದಾಗಿದೆ’ ಎಂದು ಇಂಪ್ಯಾಕ್ಟ್‌ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ನೀಲ್‌ ಮಖಿಜಾ ಹೇಳಿದರು.

‘ಕೇವಲ ಭಾರತ ಮೂಲದವರಲ್ಲಿ ಮಾತ್ರವಲ್ಲ, ಏಷ್ಯಾ ಮೂಲದ ಅಮೆರಿಕನ್ನರು ಸಹ ಈ ಚುನಾವಣೆ ಬಗ್ಗೆ ಭಾರಿ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಮೂಲದ ಅಮೆರಿಕನ್‌ ಪ್ರಜೆ ಕಮಲಾ ಹ್ಯಾರಿಸ್‌ ಕಣದಲ್ಲಿರುವುದು ಭಾರತ ಮೂಲದ ಮತದಾರರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಡೆಮಾಕ್ರಟಿಕ್‌ ಪಕ್ಷದ ಈ ಇಬ್ಬರು ಅಭ್ಯತರ್ಥಿಗಳ‌ ಗೆಲುವಿಗೆ ಇಂಪ್ಯಾಕ್ಟ್‌ ಶ್ರಮಿಸಲಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT