ಸುನಕ್ ಆಯ್ಕೆ: ‘ಐತಿಹಾಸಿಕ, ಸ್ಫೂರ್ತಿದಾಯಕ ಕ್ಷಣ’

ಲಂಡನ್: ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವುದಕ್ಕೆ ಬ್ರಿಟನ್‌ನಲ್ಲಿನ ಭಾರತೀಯ ಸಮುದಾಯದ ನಾಯಕರು ಮತ್ತು ಸಂಘಟನೆಗಳ ಮುಖಂಡರು ಹರ್ಷಗೊಂಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಬೆಳವಣಿಗೆ ‘ಐತಿಹಾಸಿಕ’ ಮತ್ತು ‘ಸ್ಫೂರ್ತಿದಾಯಕ’ ಎಂದು ಅವರು ಬಣ್ಣಿಸಿದ್ದಾರೆ.
‘ಪ್ರಧಾನಿಯಾಗಿ ಸುನಕ್ ಆಯ್ಕೆಯಾಗಿರುವ ಈ ಐತಿಹಾಸಿಕ ಕ್ಷಣ ಸೋಜಿಗವಾದದ್ದು’ ಎಂದು ಬ್ರಿಟನ್‌ನ ಭಾರತೀಯ ಚಿಂತನಾ ಚಾವಡಿ 1928 ಸಂಸ್ಥೆ.
‘ನಮ್ಮ ಹಿರಿಯರು ಬ್ರಿಟಿಷರ ಆಳ್ವಿಕೆಯನ್ನು ಕಂಡಿದ್ದರು. ನಾವು ಈಗ ಬ್ರಿಟನ್‌ನ ಅತ್ಯುನ್ನತ ಸ್ಥಾನದಲ್ಲಿ ಭಾರತೀಯ ನಾಯಕನನ್ನು ಕಾಣುತ್ತಿರುವುದು ಪ್ರೇರಣಾದಾಯಕ. ಮುಂದಿನ ಜನಾಂಗಕ್ಕೂ ಇದು ಸ್ಫೂರ್ತಿದಾಯಕ’ ಎಂದು ಸಂಸ್ಥೆ ಹೇಳಿದೆ.
ದೇಶದಲ್ಲಿ ಭಾರತ ಮೂಲದ 17 ಲಕ್ಷ ಜನರಿದ್ದು ಇದು ಒಟ್ಟು ಜನಸಂಖ್ಯೆಯ ಶೇಕಡಾ 2.5ರಷ್ಟು ಮಾತ್ರ. ಹೀಗಾಗಿ ಭಾರತೀಯ ಮೂಲದವರೊಬ್ಬರು ಪ್ರಧಾನಿ ಸ್ಥಾನಕ್ಕೇರುವುದು ಸದ್ಯದ ನಿರೀಕ್ಷೆ ಆಗಿರಲಿಲ್ಲ ಎಂದು ಐಐಎಸ್‌ಎಸ್‌ನ ದಕ್ಷಿಣ ಏಷ್ಯಾದ ಸೀನಿಯರ್ ಫೆಲೊ ರಾಹುಲ್ ರಾಯ್ ಚೌಧರಿ ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.