ಗುರುವಾರ , ಅಕ್ಟೋಬರ್ 29, 2020
19 °C
ಭಾರತೀಯ ದೂತವಾಸ ಕಚೇರಿಯಲ್ಲಿ ಗಾಂಧಿಜಯಂತಿ

ಅಮೆರಿಕದಲ್ಲಿ ಗಾಂಧೀಜಿಗೆ ಗೀತ ನಮನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಮಹಾತ್ಮಗಾಂಧಿಯವರ 151ನೇ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ಭಾರತೀಯ ರಾಜತಾಂತ್ರಿಕ ಕೇಂದ್ರದಲ್ಲಿ ಸ್ಪೂರ್ತಿದಾಯಕ ಸಂಗೀತದ ಮೂಲಕ ರಾಷ್ಟ್ರಪಿತನಿಗೆ ಗೌರವಸಲ್ಲಿಸಲಾಯಿತು. 

ಈ ವಿಶ್ವದಲ್ಲಿರುವ ಸಂಕಷ್ಟಗಳ ಪರಿಹಾರಕ್ಕಾಗಿ, ಸಂಕಷ್ಟದಲ್ಲಿರುವ ಜನರಿಗೆ ದಾರಿತೋರುವುದಕ್ಕಾಗಿ ಗಾಂಧೀಜಿಯವರಂತಹ ಮಹಾತ್ಮ ಮತ್ತೆ ಹುಟ್ಟಿಬರಬೇಕೆಂದು ಪ್ರಾರ್ಥಿಸಲಾಯಿತು.

2008ರ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿ ಶಂಭು ಹಕ್ಕಿ ಅವರು ಸಂಯೋಜಿಸಿ, ಹಾಡಿದ ‘ಬಾಪು ಮೇರೆ: ಎ ಮ್ಯುಸಿಕಲ್ ಟ್ರಿಬ್ಯೂಟ್‌ ಟು ಮಹಾತ್ಮಗಾಂಧಿ‘  ಹಿಂದಿ ದೃಶ್ಯ ಗೀತೆಯನ್ನು ಭಾರತೀಯ ರಾಯಭಾರಿ ಕೇಂದ್ರದಲ್ಲಿ ಪ್ರದರ್ಶಿಸಲಾಯಿತು.

‘ನಮ್ಮ ಬಾಪು, ದಯವಿಟ್ಟು ಈ ಜಗಕ್ಕೆ ಮತ್ತೆ ಬನ್ನಿ. ಸಂಕಷ್ಟದ ಸಮಯದಲ್ಲಿ ನಮಗೆ ದಾರಿ ತೋರಿಸಿ. ಸತ್ಯದ ದಾರಿಯಲ್ಲಿ ಕರೆದೊಯ್ಯಿರಿ. ಸತ್ಯ ಮತ್ತು ಅಹಿಂಸೆಯನ್ನು ಬೋಧಿಸಿ. ನೀವೊಬ್ಬ ಶಾಂತಿ ದೂತ‘ ಎಂದು ಹಿಂದಿ ಗೀತೆಯ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಲಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು