ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌: ಕೊನೆಯ ಹಂತದ ತೆರವು ಕಾರ್ಯಾಚರಣೆಗೆ ಚಾಲನೆ

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು
Last Updated 6 ಮಾರ್ಚ್ 2022, 21:30 IST
ಅಕ್ಷರ ಗಾತ್ರ

ನವದೆಹಲಿ : ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ತೆರವಿಗೆ ಸರ್ಕಾರವು ಸೋಮವಾರ, ‘ಆಪರೇಷನ್‌ ಗಂಗಾ’ದ ಕೊನೆಯ ಹಂತದ ಕಾರ್ಯಾಚರಣೆ ನಡೆಸಲಿದೆ. ಈ ಕಾರ್ಯಾಚರಣೆಗೆ ಭಾನುವಾರದಿಂದಲೇ ಚಾಲನೆ ನೀಡಲಾಗಿದೆ.

‘ಉಕ್ರೇನ್‌ನಲ್ಲಿ ಇರುವ ಭಾರತೀಯರು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರ ಒಳಗೆ ಹಂಗೆರಿಯ ಬುಡಾಪೆಸ್ಟ್‌ಗೆ ತಲುಪಬೇಕು’ ಎಂದು ಉಕ್ರೇನ್‌ನಲ್ಲಿನ ಭಾರತದ ರಾಯಭಾರ ಕಚೇರಿ ಭಾನುವಾರ ಮಧ್ಯಾಹ್ನ ಟ್ವೀಟ್ ಮಾಡಿದೆ. ‘ಆಪರೇಷನ್‌ ಗಂಗಾ ವಿಮಾನಗಳ ಕಾರ್ಯಾಚರಣೆಯ ಕೊನೆಯ ಹಂತಕ್ಕೆ ಚಾಲನೆ ನೀಡಲಾಗಿದೆ. ಉಕ್ರೇನ್‌ನಲ್ಲಿ ತಾವೇ ವ್ಯವಸ್ಥೆ ಮಾಡಿಕೊಂಡು ನೆಲೆಸಿರುವವರು ತಕ್ಷಣವೇ ಬುಡಾಪೆಸ್ಟ್‌ನತ್ತ ಹೊರಡಬೇಕು’ ಎಂದು ಟ್ವೀಟ್‌ನಲ್ಲಿ ಸೂಚಿಸಲಾಗಿದೆ.

ಇದಕ್ಕೂ ಮುನ್ನ ಭಾನುವಾರ ಬೆಳಿಗ್ಗೆ, ‘ಉಕ್ರೇನ್‌ನಲ್ಲಿ ಉಳಿದಿರುವ ಭಾರತೀಯರು ತೆರವು ಅರ್ಜಿಯನ್ನು ಭರ್ತಿ ಮಾಡಿ’ ಎಂದು ರಾಯಭಾರ ಕಚೇರಿಯು ಟ್ವೀಟ್‌ ಮಾಡಿತ್ತು. ಟ್ವೀಟ್‌ನಲ್ಲಿ ಗೂಗಲ್ ಅರ್ಜಿಯ ಲಿಂಕ್‌ ಲಗತ್ತಿ
ಸಿತ್ತು. ಅದರ ಬೆನ್ನಲ್ಲೇ, ಕೊನೆಯ ಹಂತದ ಕಾರ್ಯಾಚರಣೆಯ ವಿವರಗಳನ್ನು ವಿದೇಶಾಂಗ ಸಚಿವಾಲಯವು ಪ್ರಕಟಿಸಿದೆ. ‘ಈ ಕಾರ್ಯಾಚರಣೆಯ ಭಾಗವಾಗಿ ಉಕ್ರೇನ್‌ನ ನೆರೆಯ ದೇಶಗಳಿಂದ ಸೋಮವಾರ ಒಟ್ಟು ಎಂಟು ವಿಮಾನಗಳನ್ನು ನಿಯೋಜಿಸಲಾಗಿದೆ’ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಹೇಳಿದೆ.

‘ಈ ವಿಮಾನಗಳಲ್ಲಿ 1,500ಕ್ಕೂ ಹೆಚ್ಚು ಜನರನ್ನು ತೆರವು ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಹಂಗೆರಿಯ ಬುಡಾಪೆಸ್ಟ್‌ನಿಂದ ಐದು, ರೊಮೇನಿಯಾದ ಸುಸೀವಾದಿಂದ ಎರಡು ಮತ್ತು ಬುಕಾರೆಸ್ಟ್‌ನಿಂದ ಒಂದು ವಿಮಾನ ಕಾರ್ಯಾಚರಣೆ ನಡೆಸಲಿವೆ’ ಎಂದೂ ಹೇಳಿದೆ.

2,135 ಜನರ ತೆರವು: ‘ಉಕ್ರೇನ್‌ನಿಂದ ಭಾನುವಾರ ಒಂದೇ ದಿನ 2,135 ಜನರನ್ನು ತೆರವು ಮಾಡಲಾಗಿದೆ. ಇದಕ್ಕಾಗಿ11 ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು’ ಎಂದು ವಿಮಾನಯಾನ ಸಚಿವಾಲಯವು ಹೇಳಿದೆ.

ಭಾನುವಾರ ರಾತ್ರಿಯವರೆಗೆ ಒಟ್ಟು 76 ವಿಶೇಷ ವಿಮಾನಗಳ ಮೂಲಕ 15,920 ಭಾರತೀಯರನ್ನು ತೆರವು ಮಾಡಲಾಗಿತ್ತು. ಇದರಲ್ಲಿ ವಾಯುಪಡೆಯ ವಿಮಾನಗಳ ಮೂಲಕ2,056 ಜನರನ್ನು ತೆರವು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT