ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಕಳೆದುಕೊಂಡಿದ್ದ ಅನಿವಾಸಿ ಭಾರತೀಯನಿಗೆ ಲಾಟರಿಯಲ್ಲಿ ₹7.4 ಕೋಟಿ ಬಹುಮಾನ

Last Updated 21 ಡಿಸೆಂಬರ್ 2020, 16:49 IST
ಅಕ್ಷರ ಗಾತ್ರ

ಅಬುಧಬಿ: ಕಷ್ಟಕಾಲದಲ್ಲಿ ದೇವರು ಕೈಹಿಡಿಯುತ್ತಾನೆ ಎಂಬುದು ಹಲವರ ನಂಬಿಕೆ. ಅಬುಧಬಿಯಲ್ಲಿ ಕೆಲಸ ಮಾಡುತ್ತಿರುವ ಕೇರಳದ ಮೂಲದ 30 ವರ್ಷದ ನವನೀತ್ ಸಂಜೀವನ್ ಜೀವನದಲ್ಲಿ ಈ ಮಾತು ನಿಜವಾಗಿದೆ.

ಅಬು ಧಬಿ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂಜೀವನ್‌ಗೆ ಕೋವಿಡ್ ಕಾಲದಲ್ಲಿ ಕೆಲಸ ಬಿಟ್ಟು ತೆರಳುವಂತೆ ಕಂಪನಿ ಸೂಚಿಸಿದೆ. ಸದ್ಯ, ನೋಟಿಸ್ ಪೀರಿಯಡ್‌ನಲ್ಲಿರುವ ಸಂಜೀವನ್, ಕೆಲಸಕ್ಕಾಗಿ ಸಂದರ್ಶನ ಮುಗಿಸಿ ಕಾಯುತ್ತಿದ್ದಾಗ ಬಂದ ಫೋನ್ ಕರೆಯೊಂದು ಅವರ ಜೀವನ ಬದಲಾಯಿಸಿದೆ. ಆ ಕರೆ ಬಂದಿದ್ದು ದುಬೈ ಡ್ಯೂಟಿಿಫ್ರೀ (ಡಿಡಿಎಫ್) ಲಾಟರಿ ಸಂಸ್ಥೆಯಿಂದ. ಡಿಡಿಎಫ್ ಮಿಲೇನಿಯಂ ಮಿಲಿಯನೇರ್ ಡ್ರಾದಲ್ಲಿ ಸಂಜೀವನ್ 1 ಮಿಲಿಯನ್ ಡಾಲರ್ (₹7.4 ಕೋಟಿ)ಗೆದ್ದಿದ್ದರು.

ಕೇರಳದ ಕಾಸರಗೋಡಿನಲ್ಲಿ ಹುಟ್ಟಿ ಬೆಳೆದ ಸಂಜೀವನ್, ಪತ್ನಿ ಮತ್ತು ಮಗುವಿನ ಜೊತೆ ಅಬುಧಬಿಯಲ್ಲಿ ನೆಲೆಸಿದ್ದರು. ನವೆಂಬರ್ 22ರಂದು ಅವರು ಆನ್‌ಲೈನ್‌ನಲ್ಲಿ ಖರೀದಿಸಿದ್ದ ಟಿಕೆಟ್‌ಗೆ ಬಹುಮಾನ ಬಂದಿದೆ.

"ನನ್ನ ಪತ್ನಿ ಇಲ್ಲಿ ಈಗಲೂ ಕೆಲಸ ಮಾಡುತ್ತಿದ್ದಾಳೆ. ಒಳ್ಳೆ ಕೆಲಸ ಸಿಗದಿದ್ದರೆ ಊರಿಗೆ ಹಿಂದಿರುಗುವ ಯೋಚನೆ ಮಾಡಿದ್ದೆ. ನಾನು 100,000 ದಿರಾಮ್ಸ್ ಸಾಲ ಮಾಡಿದ್ದೇನೆ. ಈ ಬಹುಮಾನ ಆ ಸಾಲಕ್ಕೆ ಹೋಗಲಿದೆ," ಎಂದು ಸಂಜೀವನ್ ಗಲ್ಫ್ ನ್ಯೂಸ್‌ಗೆ ತಿಳಿಸಿದ್ದಾರೆ.

ಕುತೂಹಲದ ಸಂಗತಿಯೆಂದರೆ, ಡಿಡಿಎಫ್ ಮಿಲೇನಿಯಮ್ ಮಿಲಿಯನೇರ್ ಲಾಟರಿ ಗೆಲ್ಲುವವರಲ್ಲಿ ಭಾರತೀಯರೇ ಹೆಚ್ಚು. ನವನೀತ್ ಸಂಜೀವನ್ ಈ ಬಹುಮಾನ ಗೆದ್ದ 171ನೇ ಭಾರತೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT