ಭಾನುವಾರ, ಏಪ್ರಿಲ್ 2, 2023
32 °C

ದುಬೈ: ಭಾರತೀಯ, ಆತನ 9 ಗೆಳೆಯರಿಗೆ ಒಲಿದ ₹40 ಕೋಟಿ ಬಹುಮಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: 37 ವರ್ಷದ ಭಾರತೀಯ ಮತ್ತು ವಿವಿಧ ದೇಶಗಳ ಅವರ ಇತರೆ ಒಂಭತ್ತು ಮಂದಿ ಗೆಳೆಯರಿಗೆ ಒಟ್ಟಾಗಿ ಇಲ್ಲಿನ ರ‍್ಯಾಫೆಲೆ ಡ್ರಾನಲ್ಲಿ ಸುಮಾರು ₹ 40 ಕೋಟಿ ಜಾಕ್‌ಪಾಟ್‌ (20 ಮಿಲಿಯನ್‌ ಡಿರ‍್ರಂ) ಬಹುಮಾನ ಬಂದಿದೆ. ಅಬುಧಾಬಿಯಲ್ಲಿ ಚಾಲಕರಾಗಿರುವ ಕೇರಳ ಮೂಲದ ರೆಂಜಿತ್ ಸೋಮರಾಜನ್‌ ಈ ಅದೃಷ್ಟಶಾಲಿ.

ಇವರು ಕಳೆದ ಮೂರು ವರ್ಷಗಳಿಂದ, ಜಾಕ್‌ಪಾಟ್ ಸೇರಿದಂತೆ ವಿವಿಧ ಲಾಟರಿ ಖರೀದಿಸುತ್ತಿದ್ದರು ಎಂದು ಇಲ್ಲಿನ ಖಲೀಜ್‌ ಟೈಮ್ಸ್‌ ಶನಿವಾರ ವರದಿ ಮಾಡಿದೆ. ‘ನನಗೆ ಜಾಕ್‌ಪಾಟ್‌ ಒಲಿಯಬಹುದು ಎಂದು ಎಣಿಸಿರಲಿಲ್ಲ. 2 ಅಥವಾ 3ನೇ ಬಹುಮಾನ ಸಿಗುವ ಆಶಾವಾದಿಯಾಗಿದ್ದೆ‘ ಎಂಬ ಅವರ ಹೇಳಿಕೆಯನ್ನು ಪತ್ರಿಕೆ ಉಲ್ಲೇಖಿಸಿದೆ.

‘ಕೆಲಸ ಕಳೆದುಕೊಂಡಿದ್ದ ನಾನು ಸಂಕಷ್ಟದಲ್ಲಿದ್ದೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿದೆ. 2008ರಿಂದಲೂ ಇಲ್ಲಿಯೇ ಇದ್ದೇನೆ. ವಿವಿಧ ಕಂಪನಿಗಳಿಗೆ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದೆ‘ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು