ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಭಾರತ ಮೂಲದ ವ್ಯಕ್ತಿ ಹತ್ಯೆ

Last Updated 25 ಜನವರಿ 2023, 11:15 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ : ‘ಭಾರತ ಮೂಲದ 52 ವರ್ಷದ ಪೀನಲ್‌ ಪಟೇಲ್‌ ಎಂಬುವವರನ್ನು ಮೂವರು ಮುಸುಕುಧಾರಿ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪೀನಲ್‌ ಅವರ ಪತ್ನಿ ಹಾಗೂ ಮಗಳಿಗೆ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದರು. ಅಮೆರಿಕದಲ್ಲಿ ಒಂದೇ ವಾರದ ಒಳಗೆ ಭಾರತೀಯರ ಮೇಲೆ ಇಂಥ ದಾಳಿ ನಡೆಯುತ್ತಿರುವ ಎರಡನೇ ಘಟನೆ ಇದಾಗಿದೆ.

‘ಜನವರಿ 20ರಂದು ಜಾರ್ಜಿಯಾದಲ್ಲಿರುವ ಪೀನಲ್‌ ಅವರ ಮನೆಯ ಮುಂದಿನ ಕಾರು ನಿಲುಗಡೆ ಭಾಗದಲ್ಲಿ ಈ ಘಟನೆ ನಡೆದಿದೆ. ಪೀನಲ್‌ ಮತ್ತು ಅವರ ಕುಟುಂಬದವರು ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದಾರೆ. ಮನೆಯ ಮುಂದೆಯೇ ಮೂವರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ’ ಎಂದರು.

‘ಪೀನಲ್‌ ಅವರು ಮೂವರನ್ನು ತಡೆಯಲು ಮುಂದಾದರು, ಈ ವೇಳೆ ಪೀನಲ್‌ ಅವರ ಕುಟುಂಬಕ್ಕೂ ಗುಂಡು ತಗುಲಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದಾಗ, ಪೀನಲ್‌ ಹಾಗೂ ಅವರ ಪತ್ನಿ ರೂಪಲ್‌ಬೇನ್‌ ಪಟೇಲ್‌ ಹಾಗೂ ಮಗಳು ಭಕ್ತಿ ಪಟೇಲ್‌ ಅವರು ರಕ್ತದ ಮಡುವಿನಲ್ಲಿದ್ದರು’ ಎಂದು ಪೊಲೀಸರು ತಿಳಿಸಿದರು.

‘ದಾಳಿ ನಡೆಸಿದ ಬಳಿಕ ಮೂವರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಪಟೇಲ್‌ ಅವರ ಮನೆಯಿಂದ ಯಾವುದೇ ಕಳವು ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT