ಭಾನುವಾರ, ನವೆಂಬರ್ 29, 2020
21 °C

ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ರಾಜಾ ಕೃಷ್ಣಮೂರ್ತಿ ಮರು ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ ಅವರು ಸತತ ಮೂರನೇ ಬಾರಿಗೆ ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಮರು ಆಯ್ಕೆ ಆಗಿದ್ದಾರೆ. ಅವರು ಡೆಮಾಕ್ರಟಿಕ್ ಪಕ್ಷದವರು.

ನವದೆಹಲಿಯಲ್ಲಿ ಜನಿಸಿದ ಕೃಷ್ಣಮೂರ್ತಿ, ತಮ್ಮ ಪ್ರತಿಸ್ಪರ್ಧಿ ಪ್ರೆಸ್ಟೆನ್‌ ನೆಲ್ಸನ್‌ ಅವರನ್ನು ಸುಲಭವಾಗಿ ಮಣಿಸಿದ್ದಾರೆ. ಲಭ್ಯ ವರದಿ ಪ್ರಕಾರ, ಕೃಷ್ಣಮೂರ್ತಿ ಅವರು ಶೇ 71 ರಷ್ಟು ಮತಗಳನ್ನು ಪಡೆದಿದ್ದಾರೆ.

ಕೃಷ್ಣಮೂರ್ತಿ ಅವರ ಪೋಷಕರು ತಮಿಳುನಾಡು ಮೂಲದವರು.

ಏನತ್ಮಧ್ಯೆ, ಕ್ಯಾಲಿಫೋರ್ನಿಯಾದಿಂದ ಅಮಿ ಬೇರಾ ಅವರು ಐದನೇ ಬಾರಿ ಮತ್ತು ರೊ ಖನ್ನಾ ಅವರು ಮೂರನೇ ಬಾರಿ ಜನಪ್ರತಿನಿಧಿಗಳ ಸಭೆಗೆ ಮರು ಆಯ್ಕೆಯಾಗಲು ಬಯಸಿದ್ದಾರೆ. ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್‌ ಎರಡೂ ರಾಜ್ಯಗಳ ಫಲಿತಾಂಶ ಶೀಘ್ರದಲ್ಲಿಯೇ ಘೋಷಣೆಯಾಗುವ ಸಾಧ್ಯತೆ ಇದೆ.

ಡಾ. ಹಿರಾಲ್ ಟಿಪಿರ್ನೇನಿ ಅವರು ಅರಿಜೋನಾದಿಂದ ಮೂರನೇ ಬಾರಿಗೆ ಪುನರಾಯ್ಕೆ ಬಯಸಿ ಕಣದಲ್ಲಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಶ್ರೀಕುಲಕರ್ಣಿ ಅವರು ಟೆಕ್ಸಾಸ್‌ನಲ್ಲಿ ರಿಪಬ್ಲಿಕನ್ ಪಕ್ಷದ ಟ್ರಾಯ್ ನೆಹ್ಲ್ಸ್‌ ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು