ಮಂಗಳವಾರ, ಮಾರ್ಚ್ 28, 2023
26 °C

ಬ್ರಿಟನ್‌ ತಂತ್ರಜ್ಞಾನ ಸಮಿತಿಗೆ ಭಾರತೀಯ ಮೂಲದ ಪ್ರಿಯಾ ಲಖಾನಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಬ್ರಿಟನ್‌ನಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮತ್ತು ಅವುಗಳನ್ನು ಸೂಕ್ತವಾಗಿ ನಿಯೋಜಿಸುವ ನಿಟ್ಟಿನಲ್ಲಿ ಸರ್ಕಾರ ರಚಿಸಿರುವ ಸಮಿತಿಗೆ ಭಾರತೀಯ ಮೂಲದ ತಂತ್ರಜ್ಞೆ ಪ್ರಿಯಾ ಲಖಾನಿ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ.

ಕೃತಕ ಬುದ್ಧಿಮತ್ತೆಗೆ (ಎಐ) ಸಂಬಂಧಿಸಿದ ಶಿಕ್ಷಣ ಆಧಾರಿತ ಸಂಸ್ಥೆ ‘ಸೆಂಚುರಿ ಟೆಕ್‌’ ಸಿಇಒ ಆಗಿರುವ ಪ್ರಿಯಾ ಲಖಾನಿ ಅವರನ್ನು ಮ್ಯಾಟ್ ಕ್ಲಿಫರ್ಡ್‌ ಅವರ ಜತೆಯಲ್ಲಿ ಅಡ್ವಾನ್ಸ್‌ಡ್‌ ರೀಸರ್ಚ್‌ ಆ್ಯಂಡ್‌ ಇನ್‌ವೆನ್ಷನ್‌ ಏಜೆನ್ಸಿಯ (ಎಆರ್‌ಐಎ) ಮುಖ್ಯಸ್ಥರನ್ನಾಗಿ ನಿಯೋಜಿಸಲಾಗಿದೆ. ಈ ಸಮಿತಿಯಲ್ಲಿ ಇನ್ನೂ ಮೂವರು ತಜ್ಞರು ಇದ್ದಾರೆ. ಈ ಐವರು ಉದ್ಯಮ ತಜ್ಞರು ಬ್ರಿಟನ್‌ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಪ್ರಿಯಾ ಲಖಾನಿ ಅವರ ತಂತ್ರಜ್ಞಾನ ಕ್ಷೇತ್ರದ ಸಾಧನೆಗಾಗಿ 2014ರಲ್ಲಿ  ರಾಣಿ 2ನೇ ಎಲಿಜಬೆತ್‌ ಅವರು ‘ಆರ್ಡರ್ ಆಫ್ ದಿ ಬ್ರಿಟಿಷ್‌ ಎಂಪೈರ್’ ಪ್ರಶಸ್ತಿ ನೀಡಿ ಗೌರವಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು