ಸೋಮವಾರ, ಡಿಸೆಂಬರ್ 5, 2022
22 °C

ಕ್ಯಾಲಿಫೋರ್ನಿಯಾ: ಅಪಹರಣವಾಗಿದ್ದ ಭಾರತ ಮೂಲದ ನಾಲ್ವರು ಶವವಾಗಿ ಪತ್ತೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದ ಮರ್ಸಿಡ್ ನಗರದಲ್ಲಿ 8 ತಿಂಗಳ ಮಗು ಸೇರಿ ಕಿಡ್ನಾಪ್ ಆಗಿದ್ದ ಭಾರತ ಮೂಲದ ಒಂದೇ ಕುಟುಂಬದ 4 ಮಂದಿಯ ಮೃತದೇಹ ಪತ್ತೆಯಾಗಿದೆ.

ಮರ್ಸಿಡ್ ಕೌಂಟಿಯ ತೋಟವೊಂದರಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊದ ಆಗ್ನೇಯದಲ್ಲಿರುವ ಸ್ಯಾನ್ ಜೋಕ್ವಿನ್ ವ್ಯಾಲಿಯಲ್ಲಿರುವ ಮರ್ಸಿಡ್‌ನಲ್ಲಿ ಸೋಮವಾರ 8 ತಿಂಗಳ ಮಗು ಅರೂಹಿ ಧೇರಿ, ಆಕೆಯ ಪೋಷಕರು ಮತ್ತು ಚಿಕ್ಕಪ್ಪನನ್ನು ಅವರ ಉದ್ಯಮದ ಸ್ಥಳದಿಂದ ಅಪಹರಿಸಲಾಗಿತ್ತು. ಅಪಹರಣ ಮಾಡಿದ್ದ ವ್ಯಕ್ತಿಯ ಕಣ್ಗಾವಲು ವಿಡಿಯೊವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದರು.

ಮೃತರನ್ನು ಜಶ್‌ದೀಪ್ ಸಿಂಗ್(36), ಅವರ ಪತ್ನಿ ಜಸ್ಲೀನ್ ಕೌರ್(27), ಅವರ 8 ತಿಂಗಳ ಮಗು ಅರೂಹಿ ಧೇರಿ ಮತ್ತು ಮಗುವಿನ ಸೋದರ ಮಾವ ಅಮನ್‌ದೀಪ್ ಸಿಂಗ್(39) ಎಂದು ಗುರುತಿಸಲಾಗಿದೆ.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು