ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ನಿರಾಶ್ರಿತ ಭಾರತೀಯನ ಬಂಧನ

ರೈಲು ಬರುವಾಗ ಮಹಿಳೆಯನ್ನು ಹಳಿಗಳಿರುವ ಸುರಂಗದೊಳಗೆ ತಳ್ಳಿದ ಆರೋಪ
Last Updated 22 ನವೆಂಬರ್ 2020, 7:59 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಇಲ್ಲಿನ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಮಹಿಳೆಯೊಬ್ಬರನ್ನು ಹಳಿಗಳಿರುವ ಸುರಂಗದಲ್ಲಿ ತಳ್ಳಿದ ಭಾರತೀಯ ಮೂಲದ ನಿರಾಶ್ರಿತ ವ್ಯಕ್ತಿಯೊಬ್ಬನನ್ನು ಕೊಲೆ ಯತ್ನದ ಶಂಕೆಯ ಮೇಲೆ ಬಂಧಿಸಲಾಗಿದೆ.

ಆದಿತ್ಯ ವೇಮುಲಪತಿ (24) ಬಂಧಿತ ವ್ಯಕ್ತಿ. ಮ್ಯಾನ್‌ಹಟನ್‌ ಪ್ರಾಸಿಕ್ಯೂಟರ್‌ಗಳು ನೀಡಿರುವ ದೂರಿನ ಅನ್ವಯ, ವೇಮುಲಪತಿಯನ್ನು ಹಲ್ಲೆ ಮತ್ತು ಕೊಲೆಯತ್ನ ಪ್ರಕರಣಗಳಡಿ ಬಂಧಿಸಲಾಗಿದೆ.

’ನ್ಯಾಯಾಧೀಶರು, ವೇಮುಲಪತಿಯನ್ನು ಡಿ.4 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ‘ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.

ರೈಲು ನಿಲ್ದಾಣದ ವೀಡಿಯೊ ತುಣುಕಿನಲ್ಲಿ, ಯೂನಿಯನ್ ಸ್ಕ್ವೇರ್‌ನ ಸುರಂಗಮಾರ್ಗದ ರೈಲು ನಿಲ್ದಾಣದಲ್ಲಿ ರೈಲು ಬರುತ್ತಿರುವಾಗ ಲಿಲಿಯಾನಾ ಲಾನೊಸ್‌ ಎಂಬುವವರನ್ನುವೇಮುಲಪತಿ ಸುರಂಗದೊಳಗೆ ತಳ್ಳಿರುವ ದೃಶ್ಯವಿದೆ. ಈ ಘಟನೆಯಲ್ಲಿ ಲಾನೊಸ್ ಅವರು ಎರಡು ರೈಲು ಹಳಿಗಳ ನಡುವೆ ಬಿದ್ದಿದ್ದರಿಂದ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವರದಿಯ ಪ್ರಕಾರ ಲಾನೊಸ್ ಹೆಡ್‌ಫೋನ್ ಹಾಕಿಕೊಂಡು, ಬೈಬಲ್‌ ಭಾಗಗಳನ್ನು ಕೇಳುತ್ತಿದ್ದರು. ವೇಮುಲಪತಿ ಇವರ ಬಳಿಗೆ ಬರುವಾಗ, ಅವರು ರೈಲಿಗಾಗಿ ಕಾಯುತ್ತಿದ್ದರು ಎಂದು ಸಾಕ್ಷಿಗಳು ಹೇಳುತ್ತಿವೆ. ವಿಡಿಯೊ ತುಣುಕಿನಲ್ಲಿ, ಆಕೆಯನ್ನು ಏನೂ ಕೇಳದೇ ಸುರಂಗಕ್ಕೆ ತಳ್ಳಿದಂತಹ ದೃಶ್ಯ ದಾಖಲಾಗಿದೆ‘ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT