ಸೋಮವಾರ, ಏಪ್ರಿಲ್ 12, 2021
26 °C
ಕೃತ್ಯದ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ವೈದ್ಯೆಯನ್ನು ಹತ್ಯೆ ಮಾಡಿದ ಭಾರತ ಮೂಲದ ವೈದ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್‌: ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 43 ವರ್ಷದ ಭಾರತ ಮೂಲದ ಶಿಶುವೈದ್ಯರೊಬ್ಬರು, ಮಹಿಳಾ ವೈದ್ಯರೊಬ್ಬರಿಗೆ ಗುಂಡಿಕ್ಕಿ ಕೊನೆಗೆ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಸ್ಟಿನ್‌ನ ಆಸ್ಪತ್ರೆಯೊಂದರಲ್ಲಿ ನಡೆದಿದೆ ಎಂದು ಟೆಕ್ಸಾಸ್‌ನ ಪೊಲೀಸರು ತಿಳಿಸಿದ್ದಾರೆ. 

ಮೃತರನ್ನು ಡಾ.ಭರತ್‌ ನರುಮಂಚಿ ಎಂದು ಗುರುತಿಸಲಾಗಿದೆ. ಮಂಗಳವಾರ ‘ಚಿಲ್ಡ್ರನ್ಸ್‌ ಮೆಡಿಕಲ್‌ ಗ್ರೂಪ್‌’(ಸಿಎಂಜಿ) ಕಚೇರಿಗೆ ಗನ್‌ ಹಿಡಿದು ತೆರಳಿದ್ದ ಭರತ್‌, ಕಟ್ಟಡದೊಳಗಿದ್ದವರನ್ನು ಒತ್ತೆಯಾಳಾಗಿರಿಸಿದ್ದರು. ಈ ಸಂದರ್ಭದಲ್ಲಿ ಕೆಲವರು ತಪ್ಪಿಸಿಕೊಂಡಿದ್ದು, ಶಿಶುವೈದ್ಯೆ ಕ್ಯಾಥರೀನ್‌ ಡಾಡ್ಸನ್‌ ಎಂಬುವವರನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಭರತ್‌ ಹೋಗುವಂತೆ ತಿಳಿಸಿದ್ದರು ಎಂದು ಆಸ್ಟಿನ್‌ ಪೊಲೀಸ್‌ ಅಧಿಕಾರಿ ಲೆ.ಜೆಫ್ ಗ್ರೀನ್‌ವಾಲ್ಟ್‌ ಹೇಳಿದರು.

ಭರತ್‌, ವಾರದ ಹಿಂದಷ್ಟೇ ಸಿಎಂಜಿ ಕಚೇರಿಗೆ ತೆರಳಿ ಸ್ವಯಂಸೇವಕರಾಗಲು ಅರ್ಜಿ ಸಲ್ಲಿಸಿದ್ದರು. ‘ಆರೋಪಿಗೆ ಮಾರಕ ಕ್ಯಾನ್ಸರ್‌ ರೋಗವಿತ್ತು ಹಾಗೂ ಅವರು ಕೆಲವೇ ವಾರಗಳು ಬದುಕಲಿದ್ದಾರೆ ಎನ್ನುವ ವೈದ್ಯಕೀಯ ವರದಿ ಬಂದಿತ್ತು. ಈ ಖಿನ್ನತೆಯಿಂದಲೇ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಆದರೆ, ಜನರನ್ನು ಏಕೆ ಒತ್ತೆಯಾಳಾಗಿ ಇರಿಸಿದರು ಎನ್ನುವುದರ ಬಗ್ಗೆ ತನಿಖೆ ಮುಂದುವರಿದಿದೆ’ ಎಂದು ಗ್ರೀನ್‌ವಾಲ್ಟ್‌ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು