ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ನಿಂದನೆ: ಭಾರತೀಯ ಪ್ರಾಧ್ಯಾಪಕಿಯ ಕಾನೂನು ಸಮರ

Last Updated 9 ಮಾರ್ಚ್ 2023, 19:46 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಮೆಸಾಚುಸೆಟ್ಸ್‌ನ ವೆಲ್ಲೆಸ್ಲಿ ಬ್ಯುಸಿನೆಸ್‌ ಸ್ಕೂಲ್‌ ಸಹ ಪ್ರಾಧ್ಯಾಪಕಿ, ಭಾರತೀಯ ಮೂಲದ ಲಕ್ಷ್ಮಿ ಬಾಲಚಂದ್ರ ಅವರು ಜನಾಂಗೀಯ ನಿಂದನೆ ಮತ್ತು ಲಿಂಗತಾರತಮ್ಯಕ್ಕೆ ಒಳಗಾಗಿದ್ದು, ಇದರ ವಿರುದ್ಧ ಕಾನೂನು ಸಮರ ಸಾರಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ.

2012ರಲ್ಲಿ ಬಾಬ್ಸನ್ ಕಾಲೇಜಿನ ಉದ್ಯಮಶೀಲತೆಯ ಸಹಾಯಕ ಪ್ರಾಧ್ಯಾಪಕಿಯಾಗಿ ವೃತ್ತಿ ಆರಂಭಿಸಿದ್ದ ಲಕ್ಷ್ಮಿ ಬಾಲಚಂದ್ರ ಅವರು, ಅದೇ ವಿಭಾಗದ ಪ್ರಾಧ್ಯಾಪಕ ಮತ್ತು ಮಾಜಿ ಅಧ್ಯಕ್ಷ ಆಂಡ್ರ್ಯೂ ಕಾರ್ಬೆಟ್ ಅವರ ವಿರುದ್ಧ ಬೋಸ್ಟನ್ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.

‘ಆಂಡ್ರ್ಯೂ ಕಾರ್ಬೆಟ್ ಕೆಲಸದ ಸ್ಥಳದಲ್ಲಿ ತಾರತಮ್ಯ ತೋರಿದರು. ಇದರಿಂದ ವೃತ್ತಿ ಬದುಕಿನಲ್ಲಿ ಅನೇಕ ಅವಕಾಶ ಕಳೆದುಕೊಳ್ಳುವ ಜತೆಗೆ ಆರ್ಥಿಕ ನಷ್ಟ ಅನುಭವಿಸಬೇಕಾಯಿತು. ಕಾಲೇಜಿನ ಆಡಳಿತ ಮಂಡಳಿಯು ಸರಿಯಾಗಿ ನಡೆಸಿಕೊಳ್ಳದೆ ಭಾವನಾತ್ಮಕವಾಗಿ ಯಾತನೆ ಅನುಭವಿಸುವಂತಾಯಿತು. ಅಲ್ಲದೆ, ದೂರುಗಳ ಬಗ್ಗೆ ತನಿಖೆ ನಡೆಸಲು ಆಡಳಿತ ಮಂಡಳಿ ವಿಫಲವಾಯಿತು. ಇದರಿಂದ ನನ್ನ ಗೌರವಕ್ಕೂ ಚ್ಯುತಿಯಾಗಿದೆ’ ಎಂದು ಲಕ್ಷ್ಮಿ ಮೊಕದ್ದಮೆಯಲ್ಲಿ ದೂರಿದ್ದಾರೆ. ಇದನ್ನು ಬೋಸ್ಟನ್ ಗ್ಲೋಬ್‌ ಪತ್ರಿಕೆ ಕಳೆದ ಫೆಬ್ರುವರಿ 27ರಂದು ವರದಿ ಪ್ರಕಟಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT