ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಯಿಂದ ಸುಲಿಗೆ ಯತ್ನ: ಭಾರತ ಮೂಲದ ವ್ಯಕ್ತಿಗೆ ಸಜೆ

Last Updated 29 ನವೆಂಬರ್ 2021, 11:06 IST
ಅಕ್ಷರ ಗಾತ್ರ

ಸಿಂಗಪುರ (ಪಿಟಿಐ): ವಿವಾಹಿತ ಉದ್ಯಮಿಯೊಬ್ಬ ಸಲಿಂಗಕಾಮ ನಡೆಸುತ್ತಿದ್ದುದನ್ನು ಚಿತ್ರಿಸಿ, ₹33 ಲಕ್ಷ (60 ಸಾವಿರ ಸಿಂಗಪುರ ಡಾಲರ್) ಸುಲಿಗೆಗೆ ಯತ್ನಿಸಿದ್ದ ಭಾರತ ಮೂಲದ ಸಿಂಗಪುರ ನಿವಾಸಿಗೆ ಸ್ಥಳೀಯ ನ್ಯಾಯಾಲಯ 18 ತಿಂಗಳು ಸಜೆ ವಿಧಿಸಿದೆ.

2019ರಲ್ಲಿ ಕೃತ್ಯ ನಡೆದಿತ್ತು.ಗುಟ್ಟಾಗಿ ವಿಡಿಯೊ ಚಿತ್ರೀಕರಣ ನಡೆಸಿ, ಸುಲಿಗೆಗೆ ಯತ್ನಿಸಿದ್ದ ಕೃತ್ಯದಲ್ಲಿ ಉದ್ಯಮಿಯ ಆಪ್ತ ಸಹಾಯಕ ಸೇರಿ ಮೂವರು ಭಾಗಿಯಾಗಿದ್ದರು. ಬಳಿಕ 50 ಸಾವಿರ ಸಿಂಗಪುರ ಡಾಲರ್ ನೀಡುವಂತೆ ಉದ್ಯಮಿಗೆ ಒತ್ತಾಯಿಸಿದ್ದರು. ಆದರೆ, ಹಣ ವರ್ಗಾವಣೆಗೆ ಮುನ್ನವೇ ಮೂವರನ್ನೂ ಪೊಲೀಸರು ಬಂಧಿಸಿದ್ದರು. ಬಳಿಕ ಇವರು ಜಾಮೀನು ಮೇಲೆ ಬಿಡುಗಡೆಯಾಗಿದ್ದರು.

ಏಪ್ರಿಲ್‌ 2, 2020ರಂದು ಆರೋಪಿಯಲ್ಲಿ ಒಬ್ಬನಾದ ಟನ್‌ ಯೊಂಗ್ ಜಿಯಾನ್, 29 ವರ್ಷದ ಭಾರತ ಮೂಲದ ಮಹದೇವನ್‌ ಎಡ್ವಿನ್‌ನನ್ನು ಈ ಸುಲಿಗೆ ಕೃತ್ಯಕ್ಕೆ ಸೇರಿಸಿಕೊಂಡಿದ್ದ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಅದರಂತೆ 2020ರ ಏ.3ರಂದು ಉದ್ಯಮಿಗೆ ಸಂದೇಶ ಕಳುಹಿಸಿದ್ದ ಎಡ್ವಿನ್‌, 24 ಗಂಟೆಯಲ್ಲಿ ಹಣ ನೀಡದಿದ್ದರೆ ಸಲಿಂಗ ಕಾಮ ಕುರಿತ ವಿಡಿಯೊ ಅನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT