ಬುಧವಾರ, ಏಪ್ರಿಲ್ 14, 2021
31 °C

ಸಿಂಗಪುರದಲ್ಲಿ ಕೋವಿಡ್ ನಿಯಮ ಉಲ್ಲಂಘನೆ; ದಂಪತಿಗೆ ಜೈಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ‘ಕೋವಿಡ್‌ 19‘ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತ ಮೂಲದ ಮಹಿಳೆ ಮತ್ತು ಆಕೆಯ ಬ್ರಿಟನ್‌ ಮೂಲದ ಪತಿ ಸಿಂಗಪುರದಲ್ಲಿ ಜೈಲು ವಾಸ ಅನುಭವಿಸಿದ್ದಾರೆ.

ಅಗಾಥಾ ಮಾಘೇಶ್ ಇಯಾಮಲೈ ಎಂಬುವರಿಗೆ ಒಂದು ವಾರ ಜೈಲು ಮತ್ತು ಇವರ ಪತಿ ನಿಗೆಲ್ ಸ್ಕಿಯಾ ಅವರಿಗೆ ಎರಡು ವಾರ ಜೈಲು ಮತ್ತು ₹55,027 (1 ಸಾವಿರ ಸಿಂಗಪುರ ಡಾಲರ್‌) ದಂಡವನ್ನು ವಿಧಿಸಲಾಗಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ನಿಗೆಲ್, ಸೆಪ್ಟೆಂಬರ್‌ನಲ್ಲಿ ತನ್ನ ಪ್ರೇಯಸಿ ಇಯಾಮಲೈ ನೋಡಲು ಲಂಡನ್‌ನಿಂದ ಸಿಂಗಪುರಕ್ಕೆ ಬಂದು, ಹೋಟೆಲ್‌ವೊಂದರಲ್ಲಿ ಉಳಿದಿದ್ದರು. ‘ಕೋವಿಡ್‌ 19‘ ಮಾರ್ಗಸೂಚಿ ಪ್ರಕಾರ, ಅವರಿಗೆ ‘ಸ್ಟೇ ಹೋಮ್‌‘ (ಮನೆಯಲ್ಲೇ ಇರುವಂತೆ) ನೋಟಿಸ್ ನೀಡಲಾಗಿತ್ತು. ಆದರೂ, ನಿಗಲ್‌, ಕೋವಿಡ್‌ ನಿಯಮ ಉಲ್ಲಂಘಿಸಿ, ತಾನು ಉಳಿದಿದ್ದ ಹೋಟೆಲ್‌ ಕೊಠಡಿಯಲ್ಲಿ ಇಯಾಮಲೈ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ನಿಯಮ ಉಲ್ಲಂಘನೆ ಕಾರಣ ಇವರಿಗೆ ಎರಡು ವಾರಗಳ ಜೈಲು ವಾಸ ವಿಧಿಸಲಾಯಿತು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಜಸ್ವೇಂದರ್ ಕೌರ್ ಅವರು ‘ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಇಂಥ ನಿರ್ಬಂಧಗಳು ಅವಶ್ಯಕವಾಗಿವೆ‘ ಎಂದು  ಹೇಳಿದರು. ‘ಸೋಂಕು ಹರಡುವುದನ್ನು ತಡೆಗಟ್ಟುವುದಕ್ಕಾಗಿ ಸಂಬಂಧಿಗಳಿಗೂ ಅಡ್ಡಿಪಡಿಸುವುದು ಅನಿವಾರ್ಯವಾಗಿದೆ. ಇದಕ್ಕೆ ಎಲ್ಲರಿಂದ ತ್ಯಾಗ ಮತ್ತು ತಾಳ್ಮೆ ಅಗತ್ಯವಾಗಿದೆ‘ ಎಂದು ನ್ಯಾಯಾಧೀಶ ಕೌರ್‌ ಅವರ ಹೇಳಿಕೆಯನ್ನು ಸ್ಥಳೀಯ ಸುದ್ದಿ ವಾಹಿನಿ ವರದಿಯಲ್ಲಿ ಉಲ್ಲೇಖಿಸಿದೆ.

ಈ ದಂಪತಿ ತಾವು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು