ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ ಆಡಳಿತವಿರುವ ಅಫ್ಗಾನ್‌ಗೆ ನೆರವು ನೀಡಿದ ಭಾರತ

20,000 ಟನ್‌ ಗೋದಿ, 13 ಟನ್‌ ಔಷಧಿ, ಐದು ಲಕ್ಷ ಡೋಸ್‌ ಕೋವಿಡ್‌ ಲಸಿಕೆ ಮತ್ತು ಬಟ್ಟೆಗಳ ರವಾನೆ
Last Updated 2 ಜೂನ್ 2022, 11:34 IST
ಅಕ್ಷರ ಗಾತ್ರ

ನವದೆಹಲಿ: ತಾಲಿಬಾನ್‌ ಅಫ್ಗಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಭಾರತದ ಉನ್ನತ ಮಟ್ಟದ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ(ಎಂಇಎ) ಜಂಟಿ ಕಾರ್ಯದರ್ಶಿ ಜೆ.ಪಿ.ಸಿಂಗ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮಾನವೀಯ ದೃಷ್ಟಿಯಿಂದ20,000 ಟನ್‌ ಗೋದಿ, 13 ಟನ್‌ ಔಷಧಿ, ಐದು ಲಕ್ಷ ಡೋಸ್‌ ಕೋವಿಡ್‌ ಲಸಿಕೆ ಮತ್ತು ಬಟ್ಟೆಗಳನ್ನು ಅಫ್ಗಾನಿಸ್ತಾನಕ್ಕೆ ನೀಡಿದೆಎಂದುಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

ಕಾಬೂಲ್‌ನಲ್ಲಿರುವ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಭಾರತದ ನೆರವನ್ನು ಹಸ್ತಾಂತರಿಸಲಾಯಿತು. ಇದಲ್ಲದೆ ಹೆಚ್ಚಿನ ವೈದ್ಯಕೀಯ ನೆರವು, ಔಷಧಿ ಮತ್ತು ಆಹಾರ ಧಾನ್ಯಗಳನ್ನು ಕಳುಹಿಸುವ ಸಾಧ್ಯತೆ ಇದೆ.

ಅಫ್ಗಾನ್‌ ಸಹೋದರರೊಂದಿಗೆ ಅಭಿವೃದ್ಧಿಯ ಸಹಭಾಗಿತ್ವವನ್ನು ಮುಂದುವರಿಸುತ್ತಿದ್ದೇವೆ. ಇರಾನ್‌ನಲ್ಲಿರುವ ಅಫ್ಗಾನ್‌ ನಿರಾಶ್ರಿತರಿಗೆ ಲಸಿಕೆ ಹಾಕಲು ಲಕ್ಷಾಂತರ ಡೋಸ್‌ ಲಸಿಕೆಯನ್ನು ಉಡುಗೊರೆಯಾಗಿ ನೀಡಿದ್ದೇವೆ. ಯುನಿಸೆಫ್‌ಗೆ 6 ಕೋಟಿ ಡೋಸ್‌ ಪೋಲಿಯೊ ಲಸಿಕೆ ಮತ್ತು ಎರಡು ಟನ್‌ ಔಷಧಿಗಳನ್ನು ಒದಗಿಸಲಾಗಿದೆ ಎಂದು ಎಂಇಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT