ಮಂಗಳವಾರ, ಮಾರ್ಚ್ 21, 2023
29 °C

ಆ್ಯಪ್‌ ನಿಷೇಧದಿಂದ ಯಾರಿಗೂ ಪ್ರಯೋಜನಕರವಾಗಿಲ್ಲ ಎಂದ ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಚೀನಾದ 118 ಆ್ಯಪ್‌ಗಳನ್ನು ನಿಷೇಧಿಸುವ ಭಾರತದ ನಿರ್ಧಾರವು ಭಾರತದ ಬಳಕೆದಾರರಿಗೆ ಹಾಗೂ ಚೀನಾದ ಉದ್ಯಮಕ್ಕೆ ಪ್ರಯೋಜನಕರವಾಗಿಲ್ಲ ಎಂದು ಚೀನಾ ಪ್ರತಿಪಾದಿಸಿದ್ದು, ಈ ನಿರ್ಣಯ ವಿಶ್ವ ವಾಣಿಜ್ಯ ಸಂಸ್ಥೆ ನಿಯಮಗಳ ಉಲ್ಲಂಘನೆ ಎಂದಿದೆ. 

ಭಾರತವು ರಾಷ್ಟ್ರೀಯ ಭದ್ರತೆಗೆ ಅಪಾಯದ ಕಾರಣವನ್ನು ನೀಡಿ ಬುಧವಾರ ಜನಪ್ರೀಯ ಗೇಮ್ ಆ್ಯಪ್‌‌ ಪಬ್‌ಜಿ ಸೇರಿದಂತೆ 118 ಆ್ಯಪ್‌ಗಳನ್ನು ನಿಷೇಧಿಸಿತ್ತು. ಈ ಮೂಲಕ ಇಲ್ಲಿಯವರೆಗೂ ಒಟ್ಟು 224 ಆ್ಯಪ್‌ಗಳನ್ನು ಭಾರತ ನಿಷೇಧಿಸಿದೆ. ‘ರಾಷ್ಟ್ರೀಯ ಭದ್ರತೆ’ ಕಲ್ಪನೆಯನ್ನು ಭಾರತವು ದುರುಪಯೋಗಪಡಿಸಿಕೊಂಡಿದೆ. ಚೀನಾ ಕಂಪನಿಗಳ ವಿರುದ್ಧ ಭಾರತ ತಾರತಮ್ಯದ ಕ್ರಮ ಕೈಗೊಳ್ಳುತ್ತಿದೆ. ಭಾರತವು ಈ ನಡೆಯನ್ನು ಸರಿಪಡಿಸಿಕೊಳ್ಳಲಿ’ ಎಂದು ವಾಣಿಜ್ಯ ಸಚಿವಾಲಯದ ವಕ್ತಾರರಾದ ಗಾವ್‌ ಫೆಂಗ್‌ ಪ್ರತಿಕ್ರಿಯೆ ನೀಡಿದರು.     

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು