ಬುಧವಾರ, ಜೂನ್ 16, 2021
23 °C

ಭಾರತದಲ್ಲಿನ ಕೋವಿಡ್ ಬಿಕ್ಕಟ್ಟು ಅತೀವ ಕಳವಳಕಾರಿ: ವಿಶ್ವ ಆರೋಗ್ಯ ಸಂಸ್ಥೆ

ಪಿಟಿಐ‌ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಭಾರತದಲ್ಲಿನ ಕೋವಿಡ್ ಬಿಕ್ಕಟ್ಟು ಅತೀವ ಕಳವಳಕಾರಿಯಾಗಿ ಮುಂದುವರಿದಿದ್ದು ಎರಡನೇ ಅಲೆ ಮೊದಲನೇಯದಕ್ಕಿಂತಲೂ ಹೆಚ್ಚು ಮಾರಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್‌ ಎಚ್ಚರಿಸಿದ್ದಾರೆ.

ದೇಶದ ಹಲವಾರು ರಾಜ್ಯಗಳಲ್ಲಿನ ಪ್ರಕರಣಗಳು ಆತಂಕಕಾರಿಯಾಗಿ ಮುಂದುವರಿದಿದ್ದು, ಆಸ್ಪತ್ರೆಗಳಲ್ಲಿನ ಭರ್ತಿ ಮತ್ತು ಸಾವಿನ ಪ್ರಕರಣವನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 

ಭಾರತದಲ್ಲಿ ಕೋವಿಡ್ ಬಿಕ್ಕಟ್ಟಿಗೆ ಡಬ್ಲ್ಯುಎಚ್‌ಒ ಸೂಕ್ತ ರೀತಿಯಲ್ಲೇ ಸ್ಪಂದಿಸಿದ್ದು, ಆಮ್ಲಜನಕ ಸಾಂದ್ರಕಗಳು, ಮಾಸ್ಕ್ ಹಾಗೂ ಇತರೆ ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಸಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತಕ್ಕೆ ನೆರವಾಗುತ್ತಿರುವ ಎಲ್ಲರಿಗೂ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಶುಕ್ರವಾರದಂದು ದೇಶದಲ್ಲಿ 3,43,144 ಸೋಂಕು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು 2,40,46,809 ಪ್ರಕರಣಗಳು ವರದಿಯಾಗಿದ್ದು, 2,62,317 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್ ತುರ್ತು ಪರಿಸ್ಥಿತಿ ಭಾರತಕ್ಕಷ್ಟೇ ಸೀಮಿತವಲ್ಲ. ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಈಜಿಪ್ಟ್ ಮುಂತಾದ ರಾಷ್ಟ್ರಗಳಲ್ಲೂ ಸೋಂಕು ತೀವ್ರವಾಗಿ ಹರಡುತ್ತಿದೆ. ಆಫ್ರಿಕಾ ಖಂಡದಲ್ಲೂ ಪ್ರಕರಣಗಳು ವರ್ಧಿಸುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು