ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕನಿಗೆ ಅನಾರೋಗ್ಯ: ಪಾಕಿಸ್ತಾನದಲ್ಲಿ ತುರ್ತು ಲ್ಯಾಂಡ್‌ ಆದ ಇಂಡಿಗೊ‌ ವಿಮಾನ

Last Updated 2 ಮಾರ್ಚ್ 2021, 9:20 IST
ಅಕ್ಷರ ಗಾತ್ರ

ಕರಾಚಿ: ಶಾರ್ಜಾದಿಂದಲಖನೌಗೆ ತೆರಳಿದ್ದ ಇಂಡಿಗೊ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ತುರ್ತಾಗಿ ಲ್ಯಾಂಡ್‌ ಆಗಿದೆ.

ಅನಾರೋಗ್ಯ ಕಾಣಿಸಿಕೊಂಡ ಪ್ರಯಾಣಿಕ ಮೃತಪಟ್ಟಿರುವುದಾಗಿ ವಿಮಾನ ನಿಲ್ದಾಣದ ವೈದ್ಯಕೀಯ ತಂಡ ಖಚಿತಪಡಿಸಿರುವುದಾಗಿ ವಿಮಾನಯಾನ ಸಂಸ್ಥೆಯು ಪ್ರಕಟಿಸಿದೆ.

ʼಶಾರ್ಜಾದಿಂದ ಲಖನೌಗೆ ಪ್ರಯಾಣ ಬೆಳೆಸಿದ್ದ6E 1412 ಸಂಖ್ಯೆಯ ಇಂಡಿಗೊ ವಿಮಾನವನ್ನು ವೈದ್ಯಕೀಯ ತುರ್ತು ಸ್ಥಿತಿಯಿಂದಾಗಿ ಕರಾಚಿಯತ್ತ ತಿರುಗಿಸಲಾಯಿತು. ದುರದೃಷ್ಟವಶಾತ್‌, ಅನಾರೋಗ್ಯ ಕಾಣಿಸಿಕೊಂಡ ಪ್ರಯಾಣಿಕರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರು ಮೃತಪಟ್ಟಿದ್ದಾರೆ ಎಂದು ವಿಮಾನ ನಿಲ್ದಾಣದ ವೈದ್ಯಕೀಯ ಸಿಬ್ಬಂದಿ ಖಚಿತಪಡಿಸಿದ್ದಾರೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ತಿಂಗಳ ಆರಂಭದಲ್ಲಿ ಭಾರತದ ಏರ್‌ ಆಂಬುಲೆನ್ಸ್ ಇಂಧನ ತುಂಬಿಸುವ ಸಲುವಾಗಿ‌ ಇಸ್ಲಾಮಾಬಾದ್‌ನಲ್ಲಿ ತುರ್ತಾಗಿ ಲ್ಯಾಂಡ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT