ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯಲ್ಲಿ ಮಹಿಳೆಯರಿಗೆ ಅವಕಾಶ: ಅಫ್ಗಾನಿಸ್ತಾನಕ್ಕೆ ಐಒಸಿ ಎಚ್ಚರಿಕೆ

Last Updated 7 ಡಿಸೆಂಬರ್ 2022, 14:34 IST
ಅಕ್ಷರ ಗಾತ್ರ

ಲೂಜಾನ್, ಸ್ವಿಟ್ಜರ್ಲೆಂಡ್: ಕ್ರೀಡೆಗಳಲ್ಲಿ ಪಾಲ್ಗೊಳ್ಳಲುತಾಲಿಬಾನ್‌ ಆಡಳಿತವು ಮಹಿಳೆಯರಿಗೆ ಅವಕಾಶ ನೀಡದಿದ್ದರೆ, 2024ರ ಒಲಿಂಪಿಕ್ಸ್‌ಗೆ ಸಂಬಂಧಿಸಿ ಅಫ್ಗಾನಿಸ್ತಾನದೊಂದಿಗೆ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು (ಐಒಸಿ) ಎಚ್ಚರಿಕೆ ನೀಡಿದೆ.

‘ಕೆಲವು ನಿಬಂಧನೆಗಳ ಆಧಾರದಲ್ಲಿ ಅಫ್ಗಾನಿಸ್ತಾನ ರಾಷ್ಟ್ರೀಯ ಒಲಿಂಪಿಕ್‌ ಸಮಿತಿಗೆ ಬೆಂಬಲ ನೀಡಲಾಗುತ್ತಿದೆ’ ಎಂದು ಸಮಿತಿ ಹೇಳಿದೆ.

‘ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆಸುರಕ್ಷಿತ ಹಾಗೂ ಒಳಗೊಳ್ಳುವಿಕೆ ಪರಿಸರ ಇರಬೇಕು. ಕ್ರೀಡಾ ಆಡಳಿತದಲ್ಲಿಯೂ ಭಾಗಿಯಾಗಲು ಅವರಿಗೆ ಅವಕಾಶ ನೀಡಬೇಕು. ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ತಂಡಗಳು, ವಿದೇಶದಲ್ಲಿ ಮಾತ್ರವಲ್ಲ, ಅಫ್ಗಾನಿಸ್ತಾನದಲ್ಲಿ ವಾಸಿಸುತ್ತಿರುವ ಮಹಿಳಾ ಅಥ್ಲೀಟ್‌ಗಳನ್ನು ಒಳಗೊಂಡಿರಬೇಕು ಎಂಬ ನಿಬಂಧನೆಗಳನ್ನು ವಿಧಿಸಲಾಗಿದೆ’ ಎಂದು ಐಒಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT