ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧ ತೆರವುಗೊಳಿಸಿದರೆ ಪರಮಾಣು ಒಪ್ಪಂದಕ್ಕೆ ಮರು ಸೇರ್ಪಡೆ: ಇರಾನ್‌

Last Updated 7 ಫೆಬ್ರುವರಿ 2021, 11:18 IST
ಅಕ್ಷರ ಗಾತ್ರ

ಟೆಹರಾನ್‌: ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗಿನ ಪರಮಾಣು ಒಪ್ಪಂದದಲ್ಲಿ ಇರಾನ್‌ ಮರು ಸೇರ್ಪಡೆಯಾಗಬೇಕಿದ್ದಲ್ಲಿ ಅಮೆರಿಕವು ಇರಾನ್‌ ಮೇಲೆ ಹೇರಿರುವ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಭಾನುವಾರ ತಿಳಿಸಿದರು.

‘ಇರಾನ್‌ ಮತ್ತೆ ಒಪ್ಪಂದಕ್ಕೆ ಸೇರ್ಪಡೆಯಾಗಲು ಸಿದ್ಧವಿದೆ. ಆದರೆ, ನಮ್ಮದೇ ಆದ ಕೆಲವು ಷರತ್ತುಗಳಿವೆ’ ಎಂದು ಹೇಳಿದ್ದಾರೆ.

‘ಇರಾನ್‌ ಮತ್ತೆ ಪರಮಾಣು ಒಪ್ಪಂದಕ್ಕೆ ಸೇರ್ಪಡೆಯಾಗ ಬೇಕಿದ್ದರೆ, ಅಮೆರಿಕವು ಇರಾನ್‌ ಮೇಲೆ ಹೇರಿರುವ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಈ ಬಗ್ಗೆ ನಾವು ಪರಿಶೀಲಿಸುತ್ತೇವೆ. ಒಂದು ವೇಳೆ ಅಮೆರಿಕವು ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿಲ್ಲ ನಾವು ಪರಮಾಣು ಒಪ್ಪಂದಕ್ಕೆ ಮರು ಸೇರ್ಪಡೆಯಾಗುತ್ತೇವೆ’ ಎಂದು ಖಮೇನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT