ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್: ಮಿಲಿಟರಿ ಉಪಗ್ರಹ ‘ನೂರ್‌–2’ ಕಕ್ಷೆಗೆ

Last Updated 8 ಮಾರ್ಚ್ 2022, 11:50 IST
ಅಕ್ಷರ ಗಾತ್ರ

ದುಬೈ: ಮಿಲಿಟರಿ ಕಾರ್ಯಾಚರಣೆಗೆ ನೆರವಾಗುವ ಉಪಗ್ರಹ ‘ನೂರ್‌–2’ ಅನ್ನು ಇರಾನ್‌ ಯಶಸ್ವಿಯಾಗಿ ಭೂಕಕ್ಷೆಗೆ ಸೇರಿಸಿದೆ ಎಂದುಅರೆಸರ್ಕಾರಿ ಸುದ್ದಿಸಂಸ್ಥೆ ‘ಟಾಸ್ನಿಮ್’ ಮಂಗಳವಾರ ವರದಿ ಮಾಡಿದೆ.

‘ನೂರ್‌’ ಸರಣಿಯ ಮೊದಲ ಉಪಗ್ರಹವನ್ನು 2020ರ ಏಪ್ರಿಲ್‌ನಲ್ಲಿ ಉಡಾವಣೆ ಮಾಡಲಾಗಿತ್ತು.

ಇರಾನ್‌ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ತಡೆಹಿಡಿಯಬೇಕು ಎಂದು ಜಾಗತಿಕ ಒತ್ತಡ ಕೇಳಿಬರುತ್ತಿದೆ. ಇದೇ ವಿಷಯವಾಗಿ ವಿಯೆನ್ನಾದಲ್ಲಿ ಮಾತುಕತೆಯೂ ನಡೆಯುತ್ತಿರುವ ನಡುವೆಯೇ, ಈ ಮಿಲಿಟರಿ ಉಪಗ್ರಹ ಉಡಾವಣೆ ಮಾಡಿರುವ ಕುರಿತು ಇರಾನ್‌ನಿಂದ ಘೋಷಣೆ ಹೊರಬಿದ್ದಿದೆ.

‘ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (ಐಆರ್‌ಜಿಸಿ) ಈ ಉಪಗ್ರಹವನ್ನು ಉಡಾವಣೆ ಮಾಡಿದೆ. 500 ಕಿ.ಮೀ. ಎತ್ತರದಲ್ಲಿ ಈ ಉಪಗ್ರಹ ಭೂಮಿಯನ್ನು ಸುತ್ತುತ್ತಿದೆ’ ಎಂದು ಸುದ್ದಿಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT