ಗುರುವಾರ , ಜುಲೈ 7, 2022
23 °C

ಇಸ್ರೇಲ್‌ಗೂ ತಲುಪಬಲ್ಲ ಕ್ಷಿಪಣಿ ಇರಾನ್‌ನಿಂದ ಅಭಿವೃದ್ಧಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೆಹರಾನ್‌: ತನ್ನ ಬದ್ಧ ವೈರಿ ಇಸ್ರೇಲ್‌ ಹಾಗೂ ಇರಾನ್‌ ಸುತ್ತಮುತ್ತಲಿನ ಅಮೆರಿಕದ ಹಲವು ನೆಲೆಗಳ ಮೇಲೆ ದಾಳಿ ನಡೆಸಬಲ್ಲ ವಿಶಾಲ ವ್ಯಾಪ್ತಿಯ ಹೊಸ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಟಿವಿ ವರದಿ ಮಾಡಿದೆ.

ಘನ ಇಂಧನ ಚಾಲಿತ ಈ ಕ್ಷಿಪಣಿ 1.452 ಕಿ.ಮೀ.ತನಕ ಕ್ರಮಿಸಿ ದಾಳಿ ಮಾಡಬಲ್ಲದು. ಎರಡು ಸಾವಿರ ಕಿ.ಮೀ. ತನಕವೂ  ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ‘ಖೈಬರ್‌–ಬೂಸ್ಟರ್’ ಎಂದು ಹೆಸರಿಡಲಾಗಿದೆ. ದೇಶಿ ನಿರ್ಮಿತ ಈ ಕ್ಷಿಪಣಿ ಅತಿ ನಿಖರವಾಗಿ ಗುರಿ ತಲುಪುವುದಷ್ಟೇ ಅಲ್ಲದೆ, ವೈರಿ ರಾಷ್ಟ್ರಗಳ ಕ್ಪಿಪಣಿ ನಿಗ್ರಹ ವ್ಯವಸ್ಥೆಯನ್ನೂ ಭೇದಿಸಿ ಒಳನುಗ್ಗುವ ಸಾಮರ್ಥ್ಯ ಹೊಂದಿದೆ ಎಂದು ಇರಾನ್‌ ಹೇಳಿಕೊಂಡಿದೆ.

ಇರಾನ್‌ ಕಳೆದ ಜನವರಿಯಲ್ಲಿ ಉಪಗ್ರಹ ಉಡಾವಣೆಗೆ ಘನ ಇಂಧನ ರಾಕೆಟ್ ಎಂಜಿನ್‌ ಪರೀಕ್ಷೆ ನಡೆಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು