ಮಂಗಳವಾರ, ಜೂನ್ 22, 2021
24 °C

11 ದಿನಗಳ ಗಾಜಾ ಸಂಘರ್ಷ ಅಂತ್ಯ: ಕದನ ವಿರಾಮಕ್ಕೆ ಇಸ್ರೇಲ್, ಹಮಸ್ ಒಪ್ಪಿಗೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಟೆಲ್ ಅವಿವ್‌: ಗಾಜಾ ಪಟ್ಟಿಯಲ್ಲಿ 11 ದಿನಗಳ ಕಾಲ ನಡೆದ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದಿಂದ ಕದನ ವಿರಾಮವನ್ನು ಘೋಷಿಸಲು ಇಸ್ರೇಲ್ ಮತ್ತು ಹಮಸ್ ಒಪ್ಪಿಕೊಂಡಿವೆ.

ಈ ವಿಚಾರವಾಗಿ ಹೇಳಿಕೆ ನೀಡಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು, 'ಇಸ್ರೇಲ್‌ನ ಭದ್ರತಾ ಸಚಿವಾಲಯವು ಬೇಷರತ್ತಾದ ಕದನ ವಿರಾಮವನ್ನು ಒಪ್ಪಿಕೊಂಡಿದೆ. ಇದಕ್ಕಾಗಿ ಈಜಿಪ್ಟ್ ದೇಶವು ಮಾಡಿರುವ ಎಲ್ಲ ಶಿಫಾರಸುಗಳನ್ನು ಸರ್ವಾನುಮತದಿಂದ ಇಸ್ರೇಲ್‌ ಸ್ವೀಕರಿಸಿದೆ' ಎಂದು ಹೇಳಿದೆ.

ಹಮಸ್ ಸಂಘಟನೆಯು ಕದನ ವಿರಾಮವನ್ನು ದೃಢಪಡಿಸಿದ್ದು, ಇದು ಶುಕ್ರವಾರ ಬೆಳಿಗ್ಗೆ 2:00 ಗಂಟೆಗೆ ಜಾರಿಗೆ ಬರಲಿದೆ ಎಂದು ಹೇಳಿವೆ.

ಇದನ್ನೂ ಓದಿ- ಗಾಜಾದ ಹಲವಡೆ ಇಸ್ರೇಲ್‌ನಿಂದ ಇನ್ನಷ್ಟು ದಾಳಿ: ಹಮಸ್‌ ಮುಖಂಡರ ಮನೆಗಳೇ ಗುರಿ

ಗಾಜಾ ಪಟ್ಟಿಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಮಧ್ಯಪ್ರಾಚ್ಯ ರಾಯಭಾರಿ ಟೋರ್‌ ವೆನ್ನೆಸ್ಲ್ಯಾಂಡ್ ಅವರು ಹಮಸ್‌ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ರಾಜತಾಂತ್ರಿಕ ಮೂಲವೊಂದು ತಿಳಿಸಿದೆ.

ಇದನ್ನೂ ಓದಿ- ರಾಕೆಟ್‌ ದಾಳಿ: ಕೇರಳ ಮೂಲದ ಮಹಿಳೆ ಕುಟುಂಬಕ್ಕೆ ಇಸ್ರೇಲ್‌ ಅಧ್ಯಕ್ಷರ ಸಾಂತ್ವನ

ಇಸ್ರೇಲ್ ಮತ್ತು ಗಾಜಾದ ಹಮಸ್‌ನ ಉಗ್ರರ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ವಿಶ್ವಸಂಸ್ಥೆ ಕದನ ವಿರಾಮ ಘೋಷಿಸಲು ಮುಂದಾಗಿತ್ತು. ವಿಶ್ವಸಂಸ್ಥೆಯ ಈ ಪ್ರಸ್ತಾವಿತ ಕ್ರಮಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಪ್ರಾನ್ಸ್‌, ಜರ್ಮನಿ ಮತ್ತು ಈಜಿಪ್ಟ್‌ ದೇಶಗಳು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಲು ಸತತ ಪ್ರಯತ್ನಗಳನ್ನು ಮಾಡಿದ್ದವು.

ಇದನ್ನೂ ಓದಿ: ಗಾಜಾ–ಇಸ್ರೇಲ್‌ ಕದನ ವಿರಾಮ ಘೋಷಣೆಗೆ ವಿಶ್ವಸಂಸ್ಥೆಯ ಪ್ರಮುಖರಿಂದ ಒತ್ತಡ

ಜೆರುಸಲೇಂನ ಅಲ್-ಅಕ್ಸಾ ಮಸೀದಿಯು ವಿವಾದದ ಕೇಂದ್ರ ಬಿಂದುವಾಗಿದ್ದು, ಮುಸ್ಲಿಂ ಹಾಗೂ ಯಹೂದಿಗಳ ಪವಿತ್ರವಾದ ಸ್ಥಳವಾಗಿದೆ. ಇಲ್ಲಿ ಉಂಟಾದ ಸಂಘರ್ಷವನ್ನು ತಡೆಯಲು ಪೊಲೀಸಲು ಅಶ್ರುವಾಯು ಹಾಗೂ ಗ್ರೆನೇಡ್ ಪ್ರಯೋಗಿಸಿದ್ದರು. ಇದು ಈಗ ಗಾಜಾ ಪಟ್ಟಿಯಲ್ಲಿ ಭಾರಿ ಸಂಘರ್ಷಕ್ಕೆ ತಿರುಗಿತ್ತು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು