ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ನಿಂದ ಅಚ್ಚರಿಯ ವಾಯುದಾಳಿ ಅಭ್ಯಾಸ

Air Strike
Last Updated 15 ಫೆಬ್ರುವರಿ 2021, 5:57 IST
ಅಕ್ಷರ ಗಾತ್ರ

ಜೆರುಸಲೇಂ: ಇಸ್ರೇಲ್‌ನ ಉತ್ತರ ಭಾಗದ ಗಡಿ ಪ್ರದೇಶದಲ್ಲಿ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಇಸ್ರೇಲ್‌ನ ವಾಯುಪಡೆಯು ಅಚ್ಚರಿಯ ಸಮರಾಭ್ಯಾಸವನ್ನು ಹಮ್ಮಿಕೊಂಡಿದೆ.

ಬುಧವಾರದವರೆಗೆ ಈ ಅಭ್ಯಾಸ ನಡೆಯಲಿದ್ದು, ದೇಶದ ಆಗಸದಲ್ಲಿ ಯುದ್ಧ ವಿಮಾನಗಳ ಹಾರಾಟ ಹೆಚ್ಚಲಿದೆ ಎಂದು ಸೇನೆ ತಿಳಿಸಿದೆ.

ದೇಶದ ಗಡಿಗಳನ್ನು ಕಾಪಾಡುವುದು, ಈ ಭಾಗದಲ್ಲಿ ವಾಯುದಾಳಿ ಸಾಮರ್ಥ್ಯ ಹೆಚ್ಚಿಸುವುದು, ಗುಪ್ತಚರ ಮಾಹಿತಿ ಪಡೆಯುವುದು ಸಹಿತ ಹಲವು ಉದ್ದೇಶಗಳು ಈ ಅಭ್ಯಾಸದ ಹಿಂದೆ ಇದೆ ಎನ್ನಲಾಗಿದೆ.

ಸಿರಿಯಾದಲ್ಲಿನ ಇರಾನ್‌ ನೆಲೆಗಳನ್ನು ನಾಶಪಡಿಸುವ ಸಲುವಾಗಿ ಇಸ್ರೇಲ್‌ ಈಗಾಗಲೇ ಹಲವಾರು ವಾಯು ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಲೆಬನಾನ್‌ನ ಹಿಜ್‌ಬುಲ್ಲಾ ಉಗ್ರಗಾಮಿ ಸಂಘಟನೆಗೆ ಇರಾನ್‌ನಿಂದ ಇನ್ನಷ್ಟು ಸುಧಾರಿತ ಶಸ್ತಾಸ್ತ್ರಗಳು ರವಾನೆಯಾಗುವುದನ್ನು ತಡೆಗಟ್ಟುವ ಸಲುವಾಗಿ ಇಸ್ರೇಲ್‌ ಇಂತಹ ಯುದ್ಧ ತಂತ್ರಗಳನ್ನು ರೂಪಿಸುತ್ತಿದೆ ಎಂದು ಸೇನೆ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT