ಬೆಂಗಳೂರು: ‘ರಷ್ಯಾ ಗ್ರಾಹಕರ ಜೊತೆ ಕೆಲಸ ಮಾಡುವುದಿಲ್ಲ’ ಎಂದು ಇನ್ಫೊಸಿಸ್ ತಿಳಿಸಿದೆ.
ಈ ಬಗ್ಗೆ ಬುಧವಾರ ಪ್ರಕಟಣೆ ನೀಡಿರುವ ಇನ್ಫೊಸಿಸ್ ಸಿಇಒ ಸಲೀಲ್ ಪಾರೇಖ್, ‘ನಾವು ರಷ್ಯಾದ ಗ್ರಾಹಕರ ಜೊತೆ ಕೆಲಸ ಮಾಡುವುದಿಲ್ಲ. ಕೇವಲ ರಷ್ಯಾದಲ್ಲಿರುವ ಕೆಲವೇ ಜಾಗತಿಕ ಗ್ರಾಹಕರೊಡನೆ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.
‘ರಷ್ಯಾದಲ್ಲಿನ ಪ್ರಸ್ತುತ ಬೆಳವಣಿಗೆಯಿಂದ ನಮ್ಮ ಕಂಪನಿ ಮೇಲೆ ಪ್ರಭಾವವೇನೂ ಆಗಿಲ್ಲ. ರಷ್ಯಾದಲ್ಲಿನ ವರ್ಕ್ ಸ್ಟೆಷನ್‌ಗಳನ್ನು ರಷ್ಯಾದ ಹೊರಗೆ ಸ್ಥಳಾಂತರಿಸಲಾಗುವುದು. ಅಲ್ಲಿ 100 ಕ್ಕೂ ಕಡಿಮೆ ಇನ್ಫೊಸಿಸ್ ಉದ್ಯೋಗಿಗಳಿದ್ದಾರೆ’ ಎಂದು ತಿಳಿಸಿದ್ದಾರೆ.
ಯುರೋಪ್‌ನಲ್ಲಿ ಇನ್ಫೊಸಿಸ್ ಒಂದು ಕಂಪನಿಯಾಗಿ ಎರಡೂ ಕಡೆಗಳಿಂದ (ರಷ್ಯಾ–ಉಕ್ರೇನ್) ಶಾಂತಿ ಒಪ್ಪಂದವಾಗುವುದನ್ನು ಎದುರು ನೋಡುತ್ತಿದೆ. ಉಕ್ರೇನ್‌ನಲ್ಲಿ ಮಾನವೀಯತೆಯ ಆಧಾರದ ಮೇಲೆ 1 ಮಿಲಿಯನ್ ಡಾಲರ್ ನೆರವು ನೀಡಲಾಗಿದೆ ಎಂದು ಪಾರೇಖ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.