ಭಾನುವಾರ, ಡಿಸೆಂಬರ್ 4, 2022
19 °C

ಇಟಲಿ ವ್ಯಕ್ತಿಗೆ ಒಟ್ಟೊಟ್ಟಿಗೆ ಕೋವಿಡ್, ಎಚ್‌ಐವಿ, ಮಂಕಿಪಾಕ್ಸ್ ಪಾಸಿಟಿವ್: ವರದಿ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ರೋಮ್: ಇಟಲಿಯ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಲ್ಲಿ ಒಟ್ಟೊಟ್ಟಿಗೆ ಕೋವಿಡ್–19, ಎಚ್‌ಐವಿ ಹಾಗೂ ಮಂಕಿಪಾಕ್ಸ್ ದೃಢಪಟ್ಟಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

ಒಬ್ಬ ವ್ಯಕ್ತಿಯಲ್ಲಿ ಒಟ್ಟೊಟ್ಟಿಗೆ ಕೋವಿಡ್–19, ಎಚ್‌ಐವಿ ಹಾಗೂ ಮಂಕಿಪಾಕ್ಸ್ ದೃಢಪಟ್ಟಿರುವುದು ಇದೇ ಮೊದಲು ಎಂದು ವಿಜ್ಞಾನಿಗಳು ಹೇಳಿರುವುದಾಗಿ ‘ಡೈಲಿ ಮೇಲ್’ ವರದಿ ಮಾಡಿದೆ.

ಸೋಂಕಿತ ವ್ಯಕ್ತಿಯಲ್ಲಿ ಆಯಾಸ, ಜ್ವರ, ಗಂಟಲು ಒಣಗುವಿಕೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿದ್ದವು. ಸ್ಪೇನ್ ಪ್ರವಾಸದಿಂದ ವಾಪಸಾದ 9 ದಿನಗಳ ಬಳಿಕ ಲಕ್ಷಣಗಳು ಕಾಣಿಸಿಕೊಂಡಿದ್ದವು.

ಸೋಂಕಿತ ವ್ಯಕ್ತಿ ಜೂನ್ 16ರಿಂದ 20ರ ವರೆಗೆ ಸ್ಪೇನ್‌ನಲ್ಲಿ ತಂಗಿದ್ದರು. ಅದೇ ವೇಳೆ, ಪುರುಷನೊಬ್ಬನ ಜತೆ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ. ಜುಲೈ 2ರಂದು ಅವರಿಗೆ ಕೋವಿಡ್ ದೃಢಪಟ್ಟಿತ್ತು ಎಂದು ವರದಿ ಉಲ್ಲೇಖಿಸಿದೆ.

ಅದೇ ದಿನ ಅವರ ಎಡ ಕೈಯಲ್ಲಿ ದದ್ದುಗಳು ಎದ್ದಿದ್ದವು. ಮರುದಿನ ಕೈ, ಕಾಲು ಹಾಗೂ ಮುಖಗಳ ಮೇಲೆ ಗುಳ್ಳೆಗಳು ಕಾಣಿಸಿಕೊಂಡವು. ಜುಲೈ 5ರಂದು ಅವರಿಗೆ ಮಂಕಿಪಾಕ್ಸ್ ತಗುಲಿರುವುದು ದೃಢಪಟ್ಟಿತು. ಬಳಿಕ ಅವರನ್ನು ಲೈಂಗಿಕವಾಗಿ ಹರಡುವ ಕಾಯಿಲೆಗಳ ಪರೀಕ್ಷೆಗೂ ಒಳಪಡಿಸಲಾಯಿತು. ವರದಿಯಲ್ಲಿ ಎಚ್‌ಐವಿ ಪಾಸಿಟಿವ್ ಬಂದಿತ್ತು ಎಂದು ವರದಿ ಉಲ್ಲೇಖಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು