ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಕೋವಿಡ್ ಬಳಿಕ ತೆರೆದಿರುವ ಚಿತ್ರಮಂದಿರಗಳು ಭರ್ತಿ

Last Updated 26 ಫೆಬ್ರುವರಿ 2021, 9:33 IST
ಅಕ್ಷರ ಗಾತ್ರ

ಬೀಜಿಂಗ್‌: ದೊಡ್ಡ ಪರದೆ ಮೇಲೆ ತಮ್ಮಿಷ್ಟದ ಚಲನಚಿತ್ರ ನೋಡಿ ಆನಂದಿಸುವ, ರೋಮಾಂಚನಗೊಳ್ಳುವ ದಿನಗಳು ಚೀನಾದ ಜನತೆಗೆ ಮತ್ತೆ ಬಂದಿವೆ.

ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಗತ್ತಿನ ದೊಡ್ಡ ಮಾರುಕಟ್ಟೆ ಎನಿಸಿರುವ ಚೀನಾದ ಸಿನಿಪ್ರಿಯರು ಈ ಮನರಂಜನೆಯಿಂದ ವಂಚಿತರಾಗಿದ್ದರು. ಕೊರೊನಾ ಸೋಂಕಿನಿಂದಾಗಿ ವಿವಿಧ ಚಟುವಟಿಕೆಗಳಂತೆ ಸಿನಿಮಾ ಪ್ರದರ್ಶನದ ಮೇಲೂ ನಿರ್ಬಂಧ ಹೇರಿದ್ದೇ ಇದಕ್ಕೆ ಕಾರಣ.

ಈಗ ಕೋವಿಡ್‌–19 ನಿಯಂತ್ರಣಕ್ಕೆ ಬಂದಿರುವ ಕಾರಣ, ಚಿತ್ರಮಂದಿರಗಳಲ್ಲಿ ಅವುಗಳ ಸಾಮರ್ಥ್ಯದ ಶೇ 50ರಷ್ಟು ಸೀಟುಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಬಿಕರಿಯಾಗುತ್ತಿರುವ ಕಾರಣ ಪ್ರದರ್ಶಕರ ಸಂತಸಕ್ಕೆ ಮಿತಿಯೇ ಇಲ್ಲ ಎಂಬಂತಾಗಿದೆ.

ಗಲ್ಲಾ ಪೆಟ್ಟಿಗೆ ಸಂಗ್ರಹದ ವಿಷಯದಲ್ಲಿ ದೇಶೀಯ ನಿರ್ಮಾಣದ ಚಿತ್ರಗಳು ಹಾಲಿವುಡ್‌ ಚಿತ್ರಗಳಿಗಿಂತ ಹೆಚ್ಚು ಆದಾಯ ತರುತ್ತಿವೆ ಎಂದು ಮೂಲಗಳು ಹೇಳಿವೆ.

ಫೆಬ್ರುವರಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಟಿಕೆಟ್‌ಗಳು ಮಾರಾಟವಾಗಿವೆ. ಕೋವಿಡ್‌ನಿಂದಾಗಿ ಹಾಲಿವುಡ್‌ನಲ್ಲಿ ಸಹ ಚಿತ್ರ ನಿರ್ಮಾಣ ಕುಂಠಿತಗೊಂಡಿದೆ. ಇದರ ಲಾಭವನ್ನು ಚೀನಾದ ಚಿತ್ರರಂಗ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ರೇಕ್ಷಕರು ಅಧಿಕ ಸಂಖ್ಯೆಯಲ್ಲಿ ಈಗ ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಚಲನಚಿತ್ರ ನೋಡಲು ಚಿತ್ರಮಂದಿರಗಳಿಗೆ ಹೋದರೂ, ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್‌ ಧರಿಸಬೇಕು. ಮೊಬೈಲ್‌ನಲ್ಲಿ ನಿರ್ದಿಷ್ಟ ಆ್ಯಪ್‌ ಅಳವಡಿಸಿಕೊಂಡು, ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT