ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ–ಉ್ರಕೇನ್ ಸಂಘರ್ಷ: ಮಿಲಿಟರಿ ಸಹಕಾರಕ್ಕೆ ಜಪಾನ್, ನ್ಯಾಟೊ ಸಮ್ಮತಿ

Last Updated 7 ಜೂನ್ 2022, 12:51 IST
ಅಕ್ಷರ ಗಾತ್ರ

ಟೊಕಿಯೊ: ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣವು ಏಷ್ಯಾ ಮತ್ತು ಯುರೋಪ್‌ನಲ್ಲಿ ಭದ್ರತಾ ವ್ಯವಸ್ಥೆಯನ್ನು ಹಾಳುಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ಜಪಾನ್‌ ಹಾಗೂ ನ್ಯಾಟೊ ಪಡೆಗಳು, ಮಿಲಿಟರಿ ಸಹಕಾರ ಮತ್ತು ಜಂಟಿ ಕಾರ್ಯಾಚರಣೆ ನಡೆಸಲು ಪರಸ್ಪರ ಸಮ್ಮತಿಸಿವೆ.

ನ್ಯಾಟೊ ಮಿಲಿಟರಿ ಸಮಿತಿ ಮುಖ್ಯಸ್ಥ ರಾಬ್‌ ಬೌರ್ ಜೊತೆ ಮಂಗಳವಾರ ಸಭೆ ನಡೆಸಿರುವ ಜಪಾನ್‌ ರಕ್ಷಣಾ ಸಚಿವ ನೊಬೌ ಕಿಶಿ, ಯುರೋಪ್‌ ರಾಷ್ಟ್ರಗಳೊಂದಿಗಿನ ಬಾಂಧ‌ವ್ಯ ಗಟ್ಟಿಗೊಳಿಸಲುಜಪಾನ್‌ ಬಯಸುತ್ತದೆ ಮತ್ತು ಇಂಡೊ–ಫೆಸಿಫಿಕ್‌ ಭಾಗದಲ್ಲಿ ನ್ಯಾಟೊ ಪಾಲುದಾರಿಕೆ ವಿಸ್ತರಿಸುವುದನ್ನು ಸ್ವಾಗತಿಸುತ್ತದೆ ಎಂದಿದ್ದಾರೆ.

'ಯುರೋಪ್‌ ಹಾಗೂ ಏಷ್ಯಾದ ರಕ್ಷಣಾ ವ್ಯವಸ್ಥೆ ಒಂದಕ್ಕೊಂದು ಬೆಸೆದುಕೊಂಡಿವೆ. ಅದರಲ್ಲೂ ಮುಖ್ಯವಾಗಿ ಈಗ ಅಂತರರಾಷ್ಟ್ರೀಯ ಸಮುದಾಯ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ' ಎಂದು ಕಿಶಿ ಹೇಳಿದ್ದಾರೆ.

ಮೆಡಿಟರೇನಿಯನ್‌ ಸಮುದ್ರದಲ್ಲಿ ನ್ಯಾಟೊ ನಡೆಸಲಿರುವ ಸಮರಾಭ್ಯಾಸದಲ್ಲಿಜಪಾನ್‌ನ ಸಾಗರ ಸ್ವ-ರಕ್ಷಣಾ ಪಡೆಯು ಭಾಗವಹಿಸಲಿದೆ. ಈ ಹಿನ್ನೆಲೆಯಲ್ಲಿಬೌರ್ ಟೊಕಿಯೊಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT