ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ ಜಪಾನ್‌ನಿಂದ 5.5 ಬಿಲಿಯನ್‌ ಡಾಲರ್ ನೆರವು

Last Updated 20 ಫೆಬ್ರುವರಿ 2023, 15:46 IST
ಅಕ್ಷರ ಗಾತ್ರ

ಟೋಕಿಯೊ: ಉಕ್ರೇನ್‌ಗೆ ಹೊಸದಾಗಿ 5.5 ಬಿಲಿಯನ್ ಡಾಲರ್‌ (₹45,493 ಕೋಟಿ) ನೆರವು ನೀಡುವುದಾಗಿ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಸೋಮವಾರ ಘೋಷಿಸಿದರು.

‘ಯುದ್ಧದಿಂದ ನಲುಗಿರುವ ಜನರಿಗಾಗಿ ಮತ್ತು ಮೂಲಸೌಕರ್ಯಗಳ ಪುನರ್‌ಸ್ಥಾಪನೆಗಾಗಿ ಈ ನೆರವು ನೀಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಹಾಗೆಯೇ ಶುಕ್ರವಾರ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರೊಂದಿಗೆ ಜಿ–7 ನಾಯಕರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.

2022ರ ಫೆಬ್ರುವರಿ 24ರಿಂದೀಚೆಗೆ ಜಪಾನ್‌ ರಷ್ಯಾ ವಿರುದ್ಧ ನಿರ್ಬಂಧ ವಿಧಿಸಿದ್ದು, ಈಗಾಗಲೇ ಉಕ್ರೇನ್‌ಗೆ ನೂರಾರು ಮಿಲಿಯನ್‌ ಡಾಲರ್‌ ಮೊತ್ತದ ತುರ್ತು ಮಾನವೀಯ ನೆರವು ಹಾಗೂ 600 ಮಿಲಿಯನ್ ಡಾಲರ್‌ (₹4,963 ಕೋಟಿ) ಧನಸಹಾಯ ನೀಡಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT