ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊ–ಪೆಸಿಫಿಕ್‌ನಲ್ಲಿ ಚೀನಾ ಪ್ರಾಬಲ್ಯ ವೃದ್ಧಿ ಕುರಿತು ಅಮೆರಿಕ–ಜಪಾನ್ ಸಚಿವರ ಸಭೆ

Last Updated 16 ಮಾರ್ಚ್ 2021, 6:32 IST
ಅಕ್ಷರ ಗಾತ್ರ

ಟೋಕಿಯೊ: ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವುದರ ಕುರಿತು ಅಮೆರಿಕ ಹಾಗೂ ಜಪಾನ್‌ ಕಳವಳ ವ್ಯಕ್ತಪಡಿಸಿದ್ದು, ಮಂಗಳವಾರ ಇಲ್ಲಿ ನಡೆಯುತ್ತಿರುವ ಉಭಯ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌, ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಅವರು ಟೋಕಿಯೊಗೆ ಸೋಮವಾರ ಬಂದಿಳಿದ್ದಾರೆ. ಜಪಾನ್‌ನ ರಕ್ಷಣಾ ಸಚಿವ ನೊಬುವೊ ಕಿಶಿ, ವಿದೇಶಾಂಗ ಸಚಿವ ತೋಷಿಮಿತ್ಸು ಮೋಟೆಗಿ ಅವರೊಂದಿಗೆ ಭದ್ರತೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸುವರು.

ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾ ಪ್ರಾಬಲ್ಯವನ್ನು ತಗ್ಗಿಸುವುದು ಹಾಗೂ ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮತ್ತಷ್ಟು ದೃಢಗೊಳಿಸಬೇಕು ಎಂಬ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಳಿತದ ಆಶಯದಂತೆ ಉಭಯ ದೇಶಗಳ ಸಚಿವರ ಮಟ್ಟದ ಸಭೆಯನ್ನು ಆಯೋಜಿಸಲಾಗಿದೆ.

ಜಪಾನ್‌ನ ಸಚಿವರನ್ನು ವಾಷಿಂಗ್ಟನ್‌ಗೆ ಆಹ್ವಾನಿಸುವ ಬದಲು, ತಮ್ಮ ಸಂಪುಟದ ಇಬ್ಬರು ಸಚಿವರನ್ನು ಜಪಾನ್‌ಗೆ ಕಳುಹಿಸಿರುವ ಬೈಡನ್‌ ಅವರ ನಡೆ ಮಹತ್ವದ್ದು. ಭದ್ರತೆ ಹಾಗೂ ರಾಜತಾಂತ್ರಿಕ ನೀತಿಗೆ ಸಂಬಂಧಿಸಿದಂತೆ ಬೈಡನ್‌ ಆಡಳಿತದ ಈ ನಡೆ ಜಪಾನ್‌ಗೆ ಹೆಚ್ಚು ಅನುಕೂಲವಾಗಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT