ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನಿನಲ್ಲಿ ಕೋತಿಗಳ ಹಾವಳಿ- ಮಕ್ಕಳನ್ನು ಹೊತ್ತೊಯ್ಯುತ್ತಿರುವ ಮಂಗಗಳು

Last Updated 27 ಜುಲೈ 2022, 13:52 IST
ಅಕ್ಷರ ಗಾತ್ರ

ಟೊಕಿಯೊ (ಎಪಿ): ನೈರುತ್ಯ ಜಪಾನ್ ನಗರದಲ್ಲಿ ಕೋತಿಗಳ ಹಾವಳಿ ವಿಪರೀತವಾಗಿದ್ದು, ನರ್ಸರಿ ಶಾಲೆಗಳಲ್ಲಿನ ಪುಟ್ಟ ಮಕ್ಕಳನ್ನೂ ಹೊತ್ತೊಯ್ಯಲು ಪ್ರಯತ್ನಿಸುತ್ತಿವೆ. ಅಲ್ಲದೆ ಜನರ ಮೇಲೂ ದಾಳಿ ಮಾಡುತ್ತಿವೆ.

ಜುಲೈ 8ರಿಂದ ಈಚೆಗೆ 58 ಜನರ ಮೇಲೆ ಮಂಗಗಳು ದಾಳಿ ಮಾಡಿವೆ. ಹೀಗಾಗಿಯಮಗುಚಿ ನಗರದಲ್ಲಿ ‘ಟ್ರಾಂಕ್ವಿಲೈಸರ್‌ ಬಂದೂಕ’ನ್ನು ಬಳಸಿ ಪ್ರಾಣಿಗಳನ್ನು ಸೆರೆ ಹಿಡಿಯುವ ಘಟಕವನ್ನು ಆರಂಭಿಸಲಾಗಿದೆ.

ಕೋತಿಗಳ ದಾಳಿಯಿಂದ ಈವರೆಗೆ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ. ಆದರೆ ಕೆಲ ಪ್ರಕರಣಗಳಲ್ಲಿ ಆಂಬುಲೆನ್ಸ್‌ ಮೂಲಕ ದಾಳಿಗೊಳಗಾದವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದಾಳಿಗೆ ಒಳಗಾದವರೆಲ್ಲರನ್ನೂ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT