ಶನಿವಾರ, ಸೆಪ್ಟೆಂಬರ್ 25, 2021
24 °C

ಬೋಧನಾ ಕೆಲಸಕ್ಕೆ ಮರಳಿದ ಅಮೆರಿಕದ ಪ್ರಥಮ ಮಹಿಳೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಮಂಗಳವಾರ ತಮ್ಮ ಬೋಧನಾ ವೃತ್ತಿಗೆ ಮರಳಿದ್ದಾರೆ.

ಕೋವಿಡ್ ಪಿಡುಗು ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಇದುವರೆಗೆ ಆನ್‌ಲೈನ್‌ನಲ್ಲಿ ಪಾಠ ಮಾಡಿದ್ದ ಜಿಲ್ ಅವರು, ಮಂಗಳವಾರ ಉತ್ತರ ವರ್ಜೀನಿಯಾದ ಸಮುದಾಯ ಕಾಲೇಜಿಗೆ ಖುದ್ದಾಗಿ ಹಾಜರಾದರು. ಪ್ರತಿ ಮಂಗಳವಾರ ಮತ್ತು ಗುರುವಾರದಂದು ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಾರೆ.

2009ರಿಂದ ಈ ಕಾಲೇಜಿನಲ್ಲಿ ಬೋಧಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ ಬೈಡನ್, ‘ಕೆಲವು ವಿಷಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ನನ್ನ ವಿದ್ಯಾರ್ಥಿಗಳನ್ನು ಕಾಣಲು ತರಗತಿಗೆ ಮರಳಲು ಬಯಸುತ್ತೇನೆ, ಇನ್ನು ಕಾಯಲು ಸಾಧ್ಯವಿಲ್ಲ’ಎಂದು ಇತ್ತೀಚೆಗಷ್ಟೇ ‘ಗುಡ್ ಹೌಸ್ ಕೀಪಿಂಗ್‌’ಗೆ ನೀಡಿದ್ದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಶ್ವೇತಭವನ ತೊರೆದು ಪೂರ್ಣಕಾಲಿಕ ವೃತ್ತಿಯಲ್ಲಿ ತೊಡಗಿರುವ ಅಮೆರಿಕದ ಪ್ರಥಮ ಮಹಿಳೆ ಎನ್ನುವ ಖ್ಯಾತಿ ಜಿಲ್ ಬೈಡನ್ ಅವರದ್ದು.

‘ಈ ಹಿಂದಿನ ಅಮೆರಿಕದ ಪ್ರಥಮ ಮಹಿಳೆಯರು ಶ್ವೇತಭವನ ತೊರೆದು ಹೊರಗೆ ಉದ್ಯೋಗದಲ್ಲಿ ತೊಡಗಿಸಿಕೊಂಡಿಸಿರಲಿಲ್ಲ. ಅವರೆಲ್ಲ ಅಧ್ಯಕ್ಷರಾಗಿದ್ದ ತಮ್ಮ ಗಂಡಂದಿರ ಬೆಂಬಲಕ್ಕೆ ನಿಲ್ಲುತ್ತಿದ್ದರು. ಮಕ್ಕಳನ್ನು ಬೆಳೆಸುವುದು ಮತ್ತು ಆತಿಥ್ಯದ ಪಾತ್ರವನ್ನು ಮಾತ್ರ ನಿಭಾಯಿಸುತ್ತಿದ್ದರು’ ಎಂದು ಈ ಹಿಂದೆ ಅಮೆರಿಕದ ಪ್ರಥಮ ಮಹಿಳೆಯರಾಗಿದ್ದ ಮಿಷೆಲ್ ಒಬಾಮ, ಮೆಲನಿಯಾ ಟ್ರಂಪ್ ಅವರ ಕುರಿತು ಪುಸ್ತಕ ಬರೆದಿರುವ ಬೋಸ್ಟನ್ ವಿಶ್ವವಿದ್ಯಾಲಯದ ಸಂವಹನದ ಪ್ರಾಧ್ಯಾಪಕಿ ಟಾಮಿ ವಿಜಿಲ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು