ಭಾನುವಾರ, ಫೆಬ್ರವರಿ 28, 2021
31 °C

’ಜಾಯಿನಿಂಗ್‌ ಫೋರ್ಸಸ್‌’ ನಿರ್ದೇಶಕಿಯಾಗಿ ರೋರಿ ನೇಮಕ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವವರು, ಅವರ ಕುಟುಂಬ ಸದಸ್ಯರಿಗೆ ಹಾಗೂ ಸೇನೆಯ ನಿವೃತ್ತ ಸಿಬ್ಬಂದಿಗೆ ನೆರವು ನೀಡಲು ಸ್ಥಾಪಿಸಿರುವ ‘ಜಾಯಿನಿಂಗ್‌ ಫೋರ್ಸಸ್‌’ ಸಂಸ್ಥೆಯ ನಿರ್ದೇಶಕಿಯಾಗಿ ರೋರಿ ಬ್ರೋಸಿಯಸ್‌ ಅವರನ್ನು ನೇಮಕ ಮಾಡಲಾಗಿದೆ.

37 ವರ್ಷದ ಬ್ರೋಸಿಯಸ್‌ ಅವರು ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಜಿಲ್‌ ಬೈಡನ್‌ ಅವರ ಹಿರಿಯ ಸಲಹೆಗಾರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು.

ಸುದ್ದಿಸಂಸ್ಥೆ ಅಸೋಸಿಯೇಟೆಡ್‌ ಪ್ರೆಸ್‌ (ಎಪಿ) ಜೊತೆ ಮಾತನಾಡಿದ ಬ್ರೋಸಿಯಸ್‌, ‘ಸೇನೆಯಲ್ಲಿ ಸೇವೆ ಸಲ್ಲಿಸುವವರು, ಅವರ ಕುಟುಂಬಕ್ಕೆ ಇನ್ನೂ ನೆರವು ಅಗತ್ಯ. ಅವರಿಗೆ ಸ್ಪಂದಿಸಲು ನಾವು ಸಿದ್ಧ’ ಎಂದು ಹೇಳಿದರು.

ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಪತ್ನಿ ಜಿಲ್‌ ಬೈಡನ್‌ ಈ ನೇಮಕ ಮಾಡಿದ್ದಾರೆ. ಜಿಲ್‌ ಬೈಡನ್‌, ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಪತ್ನಿ ಮಿಷೆಲ್‌ ಒಬಾಮ ಅವರು 2011ರಲ್ಲಿ ‘ಜಾಯಿನಿಂಗ್‌ ಫೋರ್ಸಸ್‌’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು