ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ವಿಗ್ನ ಉಕ್ರೇನ್‌: ಫಲ ನೀಡದ ಬೈಡನ್‌–ಪುಟಿನ್‌ ಮಾತುಕತೆ

Last Updated 8 ಡಿಸೆಂಬರ್ 2021, 11:44 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಉಕ್ರೇನ್‌ನ ಗಡಿ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ರಷ್ಯಾದ ಸೈನಿಕರನ್ನು ನಿಯೋಜಿಸಿದ್ದರಿಂದ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಬಗೆಹರಿಸುವುದಕ್ಕಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ನಡೆದ ಎರಡು ಗಂಟೆಗಳ ಮಾತುಕತೆ ಯಾವುದೇ ಫಲ ನೀಡಿಲ್ಲ.

‘ಉಕ್ರೇನ್‌ ವಶಪಡಿಸಿಕೊಳ್ಳುವ ಯತ್ನ ನಡೆಸಿದರೆ ರಷ್ಯಾ ವಿರುದ್ಧ ಅತ್ಯಂತ ನೋವು ತರುವಂತಹ ಆರ್ಥಿಕ ದಿಗ್ಬಂಧನ ಹೇರುವುದು ನಿಶ್ಚಿತ, ಇದರಿಂದ ನಿಮ್ಮ ಆರ್ಥಿಕತೆಗೆ ಹಾನಿ ಉಂಟಾಗಲಿದೆ’ ಎಂಬ ಸರಳ ಸಂದೇಶವನ್ನು ಬೈಡನ್ ಅವರು ನೀಡಿದರು ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವಾನ್‌ ತಿಳಿಸಿದರು.

‘ರಷ್ಯಾದ ಸೇನೆ ರಷ್ಯಾದ ಗಡಿಭಾಗದಳಗೆಯೇ ಇದೆ. ಅವರು ಯಾರಿಗೂ ಬೆದರಿಕೆ ಒಡ್ಡಿಲ್ಲ’ ಎಂದು ಪುಟಿನ್‌ ಅವರು ಉತ್ತರ ನೀಡಿದರು ಎಂದು ಅವರ ವಿದೇಶಾಂಗ ಸಲಹೆಗಾರ ಯೂರಿ ಉಷಾಕೋವ್ ತಿಳಿಸಿದರು.

‘ರಷ್ಯಾವು ತನ್ನ ವಿಸ್ತರಣಾ ಮನೋಭಾವವನ್ನು ಮುಂದುವರಿಸಿದ್ದೇ ಆದರೆ ಉಕ್ರೇನ್‌ಗೆ ಹೆಚ್ಚುವರಿ ರಕ್ಷಣಾ ಸಾಮಗ್ರಿಗಳನ್ನು ಒದಗಿಸಲಾಗುವುದು, ನಮ್ಮ ನ್ಯಾಟೊ ಮಿತ್ರ ರಾಷ್ಟ್ರಗಳ ರಕ್ಷಣೆಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಅಮೆರಿಕ ಸ್ಪಷ್ಟ ಸಂದೇಶವನ್ನು ರಷ್ಯಾಕ್ಕೆ ನೀಡಿದೆ ಜಾಕ್‌ ಸುಲ್ಲಿವಾನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT