ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋ ಬೈಡನ್, ಷಿ ವರ್ಚುವಲ್ ಮಾತುಕತೆ: ಸಂಘರ್ಷ ತಪ್ಪಿಸಲು ಅಮೆರಿಕ ಕರೆ

Last Updated 16 ನವೆಂಬರ್ 2021, 3:58 IST
ಅಕ್ಷರ ಗಾತ್ರ

ವಾಷಿಂಗ್ಟನ್: ತೈವಾನ್ ಸೇರಿದಂತೆ ಇತರ ವಿಚಾರಗಳ ಮೇಲಿನ ಉದ್ವಿಗ್ನತೆಯನ್ನು ಶಾಂತಗೊಳಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ವರ್ಚುವಲ್ ಸಭೆ ಮೂಲಕ ಮಾತುಕತೆ ಆರಂಭಿಸಿದ್ದಾರೆ. ಈ ವೇಳೆ ಪ್ರತಿಸ್ಪರ್ಧಿಗಳು ಪರಸ್ಪರ 'ಸಂಘರ್ಷ'ವನ್ನು ತಪ್ಪಿಸಲು ಪ್ರಯತ್ನಿಸಬೇಕು ಎಂದು ಬೈಡನ್ ತಿಳಿಸಿದ್ದಾರೆ.

ಶ್ವೇತಭವನದಿಂದ ಸಭೆಯನ್ನು ಪ್ರಾರಂಭಿಸಿದ ಬೈಡನ್, ಅಮೆರಿಕ-ಚೀನಾ ನಡುವಿನ ಯಾವುದೇ 'ಸಂಘರ್ಷ'ವನ್ನು ತಡೆಗಟ್ಟಲು ನಮಗೆ 'ತಡೆ'ಯ ಅಗತ್ಯವಿದೆ ಮತ್ತು ಎರಡು ದೊಡ್ಡ ಆರ್ಥಿಕತೆಗಳ ನಾಯಕರು 'ನೇರ ಮತ್ತು ಪ್ರಾಮಾಣಿಕವಾದ ಚರ್ಚೆಯನ್ನು' ನಡೆಸಬೇಕು ಎಂಬುದನ್ನು ಭಾವಿಸುವುದಾಗಿಷಿಗೆ ಹೇಳಿದರು.

ಚೀನಾ ಮತ್ತು ಅಮೆರಿಕದ ನಾಯಕರಾಗಿ ಉಭಯ ದೇಶಗಳ ನಡುವಿನ ಸ್ಪರ್ಧೆಯು ಸಂಘರ್ಷಕ್ಕೆ ಕಾರಣವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ' ಎಂದು ಬೈಡನ್ ತಿಳಿಸಿದ್ದಾರೆ.

ಇದೇ ವೇಳೆ ಬೈಡನ್ ನನ್ನ 'ಹಳೆಯ ಸ್ನೇಹಿತ' ಎಂದಿರುವ ಷಿ, ಎರಡೂ ಕಡೆಯಲ್ಲೂ ಸಂವಹನವನ್ನು ಸುಧಾರಿಸುವ ಅಗತ್ಯವಿದೆ. ಚೀನಾ ಮತ್ತು ಅಮೆರಿಕದ ನಡುವಿನ ಸಂಬಂಧವನ್ನು ಧನಾತ್ಮಕ ಮಾರ್ಗದಲ್ಲಿ ಕೊಂಡೊಯ್ಯಲು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಮೆರಿಕದೊಂದಿಗೆ ಕೆಲಸ ಮಾಡಲು ನಾನು ಸಿದ್ಧವಾಗಿದ್ದೇನೆ' ಎಂದರು.

ಬೈಡನ್ ಅವರು ಜನವರಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜಿನ್‌ಪಿಂಗ್ ಜೊತೆಗೆ ನಡೆಯುತ್ತಿರುವ ಮೊದಲ ದ್ವಿಪಕ್ಷೀಯ ಸಭೆ ಇದಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಷಿ ವಿದೇಶಕ್ಕೆ ಪ್ರಯಾಣಿಸಲು ನಿರಾಕರಿಸಿದ್ದರಿಂದ, ವರ್ಚುವಲ್ ಸಭೆ ನಡೆಯುತ್ತಿದೆ. ಬೈಡನ್ ಮತ್ತು ಜಿನ್‌ಪಿಂಗ್ ಸೆಪ್ಟೆಂಬರ್‌ನಲ್ಲಿ ದೂರವಾಣಿ ಮೂಲಕ 90 ನಿಮಿಷ ಮಾತುಕತೆ ನಡೆಸಿದ್ದರು. ಅದಕ್ಕೂ ಮುನ್ನ ಫೆಬ್ರುವರಿಯಲ್ಲಿ ಸಂಭಾಷಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT