ಭಾನುವಾರ, ಜನವರಿ 16, 2022
28 °C

ಚೀನಾದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಳವಳ

ಎಎಫ್‌ಪಿ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕ್ಸಿನ್‌ಜಿಯಾಂಗ್‌, ಟಿಬೆಟ್‌ ಮತ್ತು ಹಾಂಗ್‌ಕಾಂಗ್‌ನಲ್ಲಿ ಚೀನಿ ಕಮ್ಯುನಿಸ್ಟ್‌ ಪಕ್ಷ (ಪಿಆರ್‌ಸಿ) ನಡೆದುಕೊಳ್ಳುತ್ತಿರುವ ರೀತಿ ಮತ್ತು ಅಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಚೀನಾ– ಅಮೆರಿಕ ನಡುವಿನ ವರ್ಚುವಲ್‌ ಶೃಂಗಸಭೆಯಲ್ಲಿ ಮಾತನಾಡಿದ ಬೈಡನ್‌ ಅವರು, ತೈವಾನ್‌ನಲ್ಲಿನ ಯಥಾಸ್ಥಿತಿ ಬದಲಾವಣೆಯ ಕ್ರಮ ಸರಿಯಲ್ಲ ಎಂದು ಚೀನಾಗೆ ಎಚ್ಚರಿಕೆ ನೀಡಿದ್ದಾರೆ.

ತೈವಾನ್‌ನ ಯಥಾಸ್ಥಿತಿ ಬದಲಿಸುವ ಕ್ರಮವನ್ನು ಬಲವಾಗಿ ಖಂಡಿಸಿರುವ ಬೈಡನ್‌ ಅವರು, ತೈವಾನ್‌ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ ಎಂದ ಶ್ವೇತಭವನ ತಿಳಿಸಿದೆ.

‘ಕೆಂಪುಗೆರೆ’ ದಾಟಿದರೆ ಕ್ರಮ– ಚೀನಾ ಎಚ್ಚರಿಕೆ (ಬೀಜಿಂಗ್ ವರದಿ) : ತೈವಾನ್‌ ಸ್ವಾತಂತ್ರ್ಯ ಪರವಾದ ಪಡೆಗಳು ‘ಕೆಂಪುಗೆರೆ’ ದಾಟಿದರೆ, ಚೀನಾ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಹೇಳಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ತಿಳಿಸಿದೆ.

ಉಭಯ ನಾಯಕರ ನಡುವಿನ ಶೃಂಗಸಭೆಯು ರಚನಾತ್ಮಕ, ಫಲಪ್ರದ, ವಸ್ತುನಿಷ್ಠವಾಗಿ ನಡೆದಿದೆ’ ಚೀನಾದ ಅಧಿಕೃತ ಸುದ್ಧಿ ಸಂಸ್ಥೆ ಕ್ಸಿನ್ಹುವಾ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು