ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊ ಬೈಡನ್‌ ಗೆದ್ದರೆ ಅಮೆರಿಕದ ಘನತೆ ಮಣ್ಣುಪಾಲಾಗಲಿದೆ: ಡೊನಾಲ್ಡ್ ಟ್ರಂಪ್‌

Last Updated 28 ಆಗಸ್ಟ್ 2020, 7:53 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌ ಗೆದ್ದರೆ ಅಮೆರಿಕದ ಘನತೆಗೆ ಚ್ಯುತಿ ಉಂಟಾಗಲಿದೆ. ದೇಶಕ್ಕೆ ಅಪಾಯ ಎದುರಾಗಲಿದೆ’ ಎಂದು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹರಿಹಾಯ್ದಿದ್ದಾರೆ.

ರಿಪಬ್ಲಿಕನ್‌ ಪಕ್ಷವು ಗುರುವಾರ ಟ್ರಂಪ್‌ ಅವರನ್ನುಅಧಿಕೃತವಾಗಿ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯನ್ನಾಗಿ ಪ್ರಕಟಿಸಿದ ಸಂದರ್ಭದಲ್ಲಿಶ್ವೇತ ಭವನದಲ್ಲಿ ಮಾತನಾಡಿದ ಟ್ರಂಪ್‌ ‘ಬೈಡನ್‌ ಗೆದ್ದರೆ ಅವರ ಆಡಳಿತದಲ್ಲಿ ಯಾರೂ ಸುರಕ್ಷಿತವಾಗಿರಲಾರರು. ಬೈಡನ್ ಅವರು ಅಮೆರಿಕದ ಘನತೆ, ಗೌರವವನ್ನು ಎತ್ತಿ ಹಿಡಿಯುವಂತಹ ವ್ಯಕ್ತಿಯಲ್ಲ. ಅವರು ಅಧಿಕಾರದ ಗದ್ದುಗೆ ಏರಿದರೆ ಅಮೆರಿಕದಲ್ಲಿ ಉದ್ಯೋಗ ನಷ್ಟದ ಪರಿಸ್ಥಿತಿ ಸೃಷ್ಟಿಯಾಗಲಿದೆ’ ಎಂದು ಕಿಡಿಕಾರಿದರು.

‘ಬೈಡನ್, ತಮ್ಮ ಬದುಕಿನುದ್ದಕ್ಕೂ ಇತಿಹಾಸಕ್ಕೆ ಅಪಚಾರ ಮಾಡಿಕೊಂಡೇ ಬಂದಿದ್ದಾರೆ. ನಂಬಿಕೆ ದ್ರೋಹ, ರೋಲ್‌ ಕಾಲ್‌ ಇವು ಅವರ ದಾಖಲೆಗಳು. ಅವರು ಎನ್‌ಎಎಫ್‌ಟಿಎ ಪರ ಮತ ಚಲಾಯಿಸಿದವರು. ಅದು ಅತಿ ಕೆಟ್ಟ ವ್ಯಾಪಾರ ಒಪ್ಪಂದವಾಗಿತ್ತು. ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಚೀನಾದ ಪಾಲ್ಗೊಳ್ಳುವಿಕೆಯನ್ನು ಬೆಂಬಲಿಸಿದ ವ್ಯಕ್ತಿ ಬೈಡನ್‌. ಅವರ ಇಂತಹ ಅನೇಕ ನಿರ್ಧಾರಗಳಿಂದ ಅಮೆರಿಕವು ಉತ್ಪಾದನಾ ವಲಯದಲ್ಲಿ ಹಿಂದೆಬೀಳುವಂತಾಗಿದೆ’ ಎಂದೂ ಟ್ರಂಪ್‌ ದೂರಿದ್ದಾರೆ.

‘ನಿಮ್ಮ ಮತಗಳುಕಾನೂನು ಪರಿಪಾಲಕರನ್ನು ಆಯ್ಕೆ ಮಾಡಬೇಕೊ ಅಥವಾ ದೇಶದಲ್ಲಿ ಅರಾಜಕತೆ ಸೃಷ್ಟಿಸುವ, ಪ್ರತಿಭಟನೆಗಳನ್ನು ನಡೆಸುವ ಮತ್ತು ಗೂಂಡಾಗಳನ್ನು ಸೃಷ್ಟಿಸುವವರನ್ನು ಆಯ್ಕೆಮಾಡಬೇಕೊ ಎಂಬುದನ್ನು ನಿರ್ಧರಿಸಲಿವೆ’ ಎಂದೂ ಟ್ರಂಪ್‌ ಅವರು ಅಮೆರಿಕದ ಪ್ರಜೆಗಳಿಗೆ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT