ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಿಂದ ಉಕ್ರೇನ್‌ಗೆ ₹ 21,566 ಕೋಟಿ ಹೆಚ್ಚುವರಿ ಭದ್ರತಾ ನೆರವು

ಅಕ್ಷರ ಗಾತ್ರ

ವಾಷಿಂಗ್ಟನ್‌:ಅಮೆರಿಕವು ಯುದ್ಧಪೀಡಿತ ಉಕ್ರೇನ್‌ಗೆ ಮತ್ತಷ್ಟು ರಾಕೆಟ್‌ ಲಾಂಚರ್‌ಗಳು ಸೇರಿದಂತೆ₹ 21,566 ಕೋಟಿ ಮೌಲ್ಯದ ಹೆಚ್ಚುವರಿ ಭದ್ರತಾ ನೆರವನ್ನು ನೀಡಲಿದೆ ಎಂದು ಶ್ವೇತಭವನ ಪ್ರಕಟಿಸಿದೆ. ಈ ಬಗ್ಗೆ ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ರಾಷ್ಟ್ರೀಯ ರಕ್ಷಣಾ ಮಂಡಳಿಯ ವಕ್ತಾರ ಜಾನ್‌ ಕಿರ್ಬಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಧ್ಯಕ್ಷ ಜೋ ಬೈಡನ್‌ ಆಡಳಿತವು ಹೆಚ್ಚುವರಿಯಾಗಿನಾಲ್ಕು ಟ್ರಕ್-ಮೌಂಟೆಡ್ ರಾಕೆಟ್ ಲಾಂಚರ್‌ಗಳು, ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್‌, ಡ್ರೋಣ್‌ಗಳನ್ನು ರವಾನಿಸಲಿದೆ ಎಂದು ತಿಳಿಸಿದ್ದಾರೆ.

ಉಕ್ರೇನ್‌ ಮೇಲೆ ಆಕ್ರಮಣ ಮುಂದುವರಿಸಿರುವ ರಷ್ಯಾ ಪಡೆಗಳಿಗೆ ಮೊಬೈಲ್‌ ರಾಕೆಟ್‌ ಲಾಂಚರ್‌ಗಳು ತೀವ್ರ ಹಾನಿಯನ್ನುಂಟುಮಾಡಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೈಡನ್‌ ಸರ್ಕಾರ ಉಕ್ರೇನ್‌ಗೆ ಈವರೆಗೆ₹ 6.54 ಲಕ್ಷ ಕೋಟಿ ಮೌಲ್ಯದ ರಕ್ಷಣಾ ನೆರವು ನೀಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ಯಾಕೇಜ್‌ ಘೋಷಿಸಲಾಗುವುದು ಎಂದಿರುವ ಕರ್ಬಿ, 'ಉಕ್ರೇನ್ ಸರ್ಕಾರ ಮತ್ತು ಅಲ್ಲಿನಜನರಿಗೆ ಅಗತ್ಯವಿರುವ ತನಕ ಬೆಂಬಲ ಮುಂದುವರಿಸುವುದಾಗಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ' ಎಂದೂ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಲುಫೆಬ್ರುವರಿ24ರಂದು ಕರೆ ನೀಡಿದ್ದರು. ರಷ್ಯಾ ಪಡೆಗಳುಅಂದಿನಿಂದಲೂ ಆಕ್ರಮಣ ಮುಂದುವರಿಸಿದ್ದು, ಉಕ್ರೇನ್‌ ಸೇನೆಯೂ ಪ್ರತಿದಾಳಿ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT