ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರ ಮೇಲೆ ಶೀಘ್ರ ಜಾನ್ಸನ್ ಅಂಡ್ ಜಾನ್ಸನ್ ಕೋವಿಡ್ ಲಸಿಕೆ ಪ್ರಯೋಗ

Last Updated 31 ಅಕ್ಟೋಬರ್ 2020, 2:41 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು 12ರಿಂದ 18ರ ವಯೋಮಾನದ ಯುವಜನರ ಮೇಲೆ ಕೋವಿಡ್-19 ಲಸಿಕೆಯ ಪ್ರಯೋಗವನ್ನು ಶೀಘ್ರ ಆರಂಭಿಸಲಿದೆ ಎಂದು ಕಂಪನಿಯ ಪ್ರತಿನಿಧಿಗಳು ಅಮೆರಿಕದ ರೋಗ ನಿಯಂತ್ರಣ ಸಂಸ್ಥೆಗೆ ಶುಕ್ರವಾರ ಮಾಹಿತಿ ನೀಡಿದ್ದಾರೆ.

'ಸುರಕ್ಷೆಯ ಬಗ್ಗೆ ಎಚ್ಚರಿಕೆ ಇರಿಸಿಕೊಂಡೇ,ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಾವು ಮಕ್ಕಳ ಮೇಲೆ ಪ್ರಯೋಗ ಆರಂಭಿಸುತ್ತೇವೆ. ಸುರಕ್ಷೆ ಮತ್ತು ಇತರ ವಿಚಾರಗಳನ್ನು ಆಧರಿಸಿ, ಚಿಕ್ಕ ವಯಸ್ಸಿನ ಮಕ್ಕಳ ಮೇಲೆಯೂ ನಂತರದ ದಿನಗಳಲ್ಲಿಪರೀಕ್ಷೆ ಆರಂಭಿಸಲು ಕಂಪನಿ ನಿರ್ಧರಿಸಿದೆ' ಎಂದು ಜಾನ್ಸ್‌ನ್ ಅಂಡ್ ಜಾನ್ಸ್‌ನ್ ಕಂಪನಿಯ ಡಾ.ಜೆರಿ ಸಡೋಫ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು.

ಸೆಪ್ಟೆಂಬರ್‌ ತಿಂಗಳ ಕೊನೆಯಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ಒಟ್ಟು 60,000 ಮಂದಿಯ ಮೇಲೆ 3ನೇ ಹಂತದ ಅಧ್ಯಯನ ಆರಂಭಿಸಿತು. ಆದರೆ ಪರೀಕ್ಷಾರ್ಥ ಲಸಿಕೆ ಪಡೆದಿದ್ದ ಒಬ್ಬರಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಿಲ್ಲಿಸಬೇಕಾಯಿತು. ಕಳೆದ ವಾರದಿಂತ ಪ್ರಯೋಗಗಳು ಮತ್ತೆ ಆರಂಭವಾಗಿವೆ.

ಅಮೆರಿಕದ ಮತ್ತೊಂದು ಪ್ರಮುಖ ಔಷಧ ತಯಾರಿಕಾ ಕಂಪನಿ ಫಿಝೆರ್ ಸಹ ಕೋವಿಡ್-19 ಲಸಿಕೆಯ ಪ್ರಯೋಗ ಆರಂಭಿಸಿದೆ. ಜರ್ಮನಿಯ ಬಯೋಎನ್‌ಟೆಕ್ ಸಂಸ್ಥೆಯ ಜೊತೆಗೂಡಿ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಫಿಝೆರ್, 12 ವರ್ಷದ ಮಕ್ಕಳಿಗೂ ಪ್ರಯೋಗಾರ್ಥ ಲಸಿಕೆ ನೀಡಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT