ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ - ಉಕ್ರೇನ್ ಬಿಕ್ಕಟ್ಟು: ಜೂಡೊ ಫೆಡರೇಷನ್‌ನಿಂದ ಪುಟಿನ್ ವಜಾ

Last Updated 27 ಫೆಬ್ರುವರಿ 2022, 10:43 IST
ಅಕ್ಷರ ಗಾತ್ರ

ಬುಡಾಪೆಸ್ಟ್‌, ಹಂಗರಿ: ಅಂತರರಾಷ್ಟ್ರೀಯ ಜೂಡೊ ಫೆಡರೇಷನ್‌ನ ಗೌರವ ಅಧ್ಯಕ್ಷ ಸ್ಥಾನದಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಮಾನತು ಮಾಡಲಾಗಿದೆ. ಉಕ್ರೇನ್ ಮೇಲೆ ಅತಿಕ್ರಮಣ ಮಾಡಿರುವುದನ್ನು ವಿರೋಧಿಸಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಫೆಡರೇಷನ್‌ನ ಆಡಳಿತ ಭಾನುವಾರ ತಿಳಿಸಿದೆ.

ನೆಲ, ಜಲ ಮತ್ತು ವಾಯುಮಾರ್ಗದ ಮೂಲಕ ರಷ್ಯಾವು ಉಕ್ರೇನ್ ಮೇಲೆ ಗುರುವಾರ ದಿಢೀರ್ ಆಕ್ರಮಣ ನಡೆಸಿತ್ತು. ಹೀಗಾಗಿ ಉಕ್ರೇನ್‌ನಲ್ಲಿ ಈಗ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಜೂಡೊದಲ್ಲಿ ಬ್ಲ್ಯಾಕ್‌ಬೆಲ್ಟ್‌ ಹೊಂದಿರುವ 69 ವರ್ಷದ ಪುಟಿನ್ ‘ಜೂಡೊ: ಇತಿಹಾಸ,ಸಿದ್ಧಾಂತ ಮತ್ತು ಅಭ್ಯಾಸ’ ಎಂಬ ಪುಸ್ತಕ ರಚಿಸಿದ್ದಾರೆ.

ರಷ್ಯಾದ ಕಜಾನ್‌ನಲ್ಲಿ ಮೇ 20ರಿಂದ 22ರ ವರೆಗೆ ನಡೆಯಬೇಕಾಗಿದ್ದ ಜೂಡೊ ಗ್ರ್ಯಾನ್‌ಸ್ಲಾಂ ಟೂರ್ನಿಯನ್ನು ರದ್ದುಗೊಳಿಸಿರುವುದಾಗಿ ಜೂಡೊ ಫೆಡರೇಷನ್ ಶುಕ್ರವಾರ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT