ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಕಮಲಾ ಪ್ರಮಾಣ ವಚನ

Last Updated 20 ಜನವರಿ 2021, 18:10 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕ್ಯಾಪಿಟಲ್ ಬಿಲ್ಡಿಂಗ್‌ನ ವೆಸ್ಟ್ ಫ್ರಂಟ್‌ನಲ್ಲಿ ಬುಧವಾರ ನಡೆದ ಐತಿಹಾಸಿಕ ಸಮಾರಂಭದಲ್ಲಿ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಭಾರತೀಯ ಸಂಜಾತೆ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕರಿಸಿದರು.

56 ವರ್ಷದ ಕಮಲಾ ಹ್ಯಾರಿಸ್ ಅಮೆರಿಕದ 49ನೇ ಉಪಾಧ್ಯಕ್ಷೆಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿದ್ದ ಮೈಕ್ ಪೆನ್ಸ್ ಅವರು ಕಮಲಾ ಹ್ಯಾರಿಸ್ ಅವರಿಗೆ ತಮ್ಮ ಕಚೇರಿಯನ್ನು ಬಿಟ್ಟುಕೊಟ್ಟರು.

ತಮಿಳುನಾಡಿನ ಚೆನ್ನೈನಿಂದ ಅಮೆರಿಕಕ್ಕೆ ವಲಸೆ ಬಂದ ಭಾರತೀಯ ಕುಟುಂಬದವರಾದ ಕಮಲಾ ಹ್ಯಾರಿಸ್ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ, ಅಮೆರಿಕದ ಉಪಾಧ್ಯಕ್ಷೆ ಸ್ಥಾನ ಅಲಂಕರಿಸುತ್ತಿರುವ ದಕ್ಷಿಣ ಏಷ್ಯಾದ ಮೊದಲ ಮಹಿಳಾ ಉಪಾಧ್ಯಕ್ಷೆ, ಮೊದಲ ಕಪ್ಪುವರ್ಣೀಯ ವ್ಯಕ್ತಿ ಎಂಬ ಹಿರಿಮೆಯೂ ಅವರದ್ದಾಗಿದೆ.

ಕಮಲಾ ಅವರ ಪತಿ ಡೌಗ್ಲಾಸ್ ಎಮ್ಹಾಫ್‌ ಅವರು ಮೊದಲ ‘ಸೆಂಕೆಡ್ ಜಂಟಲ್‌ಮ್ಯಾನ್’ ಆಗಲಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್‌ನ ಮೊದಲ ಲ್ಯಾಟಿನಾ ಸದಸ್ಯೆ, ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ ಅವರಿಂದ ಕಮಲಾ ಪ್ರಮಾಣ ವಚನ ಸ್ವೀಕರಿಸಿದರು.

ಎರಡು ಬೈಬಲ್‌ಗಳ ಮೇಲೆ ಕೈ ಇಟ್ಟು ಕಮಲಾ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಒಂದು ಬೈಬಲ್ ಕಮಲಾ ಅವರ ಕುಟುಂಬ ಸ್ನೇಹಿತರೆ ರೆಜಿನಾ ಶೆಲ್ಟನ್ ಅವರು ನೀಡಿದ್ದಾಗಿದ್ದರೆ, ಮತ್ತೊಂದು ಬೈಬಲ್ ಮೊದಲ ಆಫ್ರಿಕನ್ ಅಮೆರಿಕನ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ತುರ್ಗುಡ್ ಮಾರ್ಷಲ್‌ಗೆ ಅವರಿಗೆ ಸೇರಿದ್ದಾಗಿದೆ.

ಕಮಲಾ ಅವರು ಅಮೆರಿಕದ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ತಮಿಳುನಾಡಿನಲ್ಲಿ ಸಂಭ್ರಮಾಚರಣೆ ನಡೆಯಿತು.

ನೀಲಿ ದಿರಿಸಿನಲ್ಲಿ ಕಂಗೊಳಿಸಿದ ಕಮಲಾ

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಮಲಾ ಹ್ಯಾರಿಸ್ ಧರಿಸಿದ್ದ ನೀಲಿ ಬಣ್ಣದ ಉಡುಪಿನ ಬಗ್ಗೆ ಅಮೆರಿಕದ ಮಾಧ್ಯಮಗಳು ಹಲವು ರೀತಿಯಲ್ಲಿ ವಿಶ್ಲೇಷಿಸಿವೆ.

‘ಕಮಲಾ ಅವರ ಉಡುಪು ದೃಢನಿಶ್ಚಯದ ಸಂಕೇತದಂತಿದೆ. ಉಡುಪಿನ ಬಣ್ಣ ಮತ್ತು ವಿನ್ಯಾಸ ಕೆಲಸದ ಕಡೆಗೆ ಅವರಿಗಿರುವ ಬದ್ಧತೆಯ ಜತೆಗೆ ಕಮಲಾ ವ್ಯಕ್ತಿತ್ವವನ್ನೂ ಪ್ರತಿನಿಧಿಸುವಂತಿದೆ’ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ನೀಲಿ ಬ್ಲೇಜರ್ ಧರಿಸಿದ್ದ ಕಮಲಾ ಕಡುಕಪ್ಪು ಬಣ್ಣದ ಕೈಗವಸು ಮತ್ತು ಶೂಗಳನ್ನು ಧರಿಸಿದ್ದರು. ಉಡುಪಿಗೆ ಹೊಂದುವ ಮುತ್ತಿನ ಕಿವಿಯೋಲೆ, ಮುತ್ತಿನ ಸರವನ್ನು ಧರಿಸಿದ್ದರು.

ಕಮಲಾ ಅವರ ಉಡುಪನ್ನು ಅಮೆರಿಕದ ಕಪ್ಪು ವರ್ಣೀಯ ವಸ್ತ್ರವಿನ್ಯಾಸಕರಾದ ಕ್ರಿಸ್ಟೋಫರ್ ಜಾನ್ ರೋಜರ್ಸ್ ಮತ್ತು ಸೆರ್ಗಿಯೋ ಹಡ್ಸನ್ ಅವರು ವಿನ್ಯಾಸಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT