ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದರ್ಶನ ನೇರಪ್ರಸಾರದಲ್ಲಿ ಲಸಿಕೆ ಹಾಕಿಸಿಕೊಂಡ ಕಮಲಾ ಹ್ಯಾರಿಸ್

Last Updated 30 ಡಿಸೆಂಬರ್ 2020, 2:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರತ ಮೂಲದ ಅಮೆರಿಕ ನಿವಾಸಿ ಕಮಲಾ ಹ್ಯಾರಿಸ್ ದೂರದರ್ಶನದ ನೇರಪ್ರಸಾರದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಆಫ್ರಿಕನ್–ಅಮೆರಿಕನ್ ಜನರಲ್ಲಿ ಲಸಿಕೆ ಅಭಿಯಾನದ ಬಗ್ಗೆ ನಂಬಿಕೆ ಮೂಡಿಸುವ ಪ್ರಯತ್ನ ನಡೆಸಿದರು.

ಆಫ್ರಿಕನ್–ಅಮೆರಿಕನ್ ಜನಸಂಖ್ಯೆ ಹೆಚ್ಚಾಗಿರುವ ವಾಂಷಿಗ್ಟಂನ್ ಡಿಸಿಯ ಆರೋಗ್ಯ ಕೇಂದ್ರದಲ್ಲಿ ಮಾಸ್ಕ್ ತೊಟ್ಟಿದ್ದ ಕಮಲಾ ಹ್ಯಾರಿಸ್ ತಮ್ಮ ಮೊದಲ ಎರಡು ಡೋಸ್ ಲಸಿಕೆ ಸ್ವೀಕರಿಸಿದರು.

ದೇಶದಾದ್ಯಂತ ಆಫ್ರಿಕನ್-ಅಮೇರಿಕನ್ ಸಮುದಾಯವು ಕೋವಿಡ್ -19 ಮಹಾಮಾರಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವು ಮತ್ತು ಅನಾರೋಗ್ಯವನ್ನು ಕಂಡಿದೆ. ಇದು ಆದಷ್ಟು ಬೇಗ ಲಸಿಕೆ ನಿರೀಕ್ಷೆಯಲ್ಲಿದ್ದ ಸಮುದಾಯ ಎಂದು ಸಮೀಕ್ಷೆ ಸಹ ಹೇಳಿತ್ತು.

"ನಿಮ್ಮ ಸಮುದಾಯದಲ್ಲಿಯೇ ನೀವು ಲಸಿಕೆ ತೆಗೆದುಕೊಳ್ಳಬಹುದು ಎಂದು ಜನರಿಗೆ ನೆನಪಿಸಲು ನಾನು ಬಯಸುತ್ತೇನೆ, ಅಲ್ಲಿ ನಿಮಗೆ ತಿಳಿದಿರುವ ಜನರಿಂದಲೇ ನೀವು ಲಸಿಕೆಯನ್ನು ಸ್ವೀಕರಿಸುತ್ತೀರಿ" ಎಂದು ಅಮೆರಿಕದ ಸಂಸ್ಥೆ ಮಾಡರ್ನಾ ತಯಾರಿಸಿದ ಲಸಿಕೆ ಸ್ವೀಕರಿಸಿದ ಬಳಿಕ ಕಮಲಾ ಹ್ಯಾರಿಸ್ ಹೇಳಿದ್ದಾರೆ.

"ಈ ಮೂಲಕ ಇಲ್ಲಿನ ಜನರಿಗೆ ಅವರು ವಿಶ್ವಾಸಾರ್ಹ ಸಹಾಯ ಮೂಲಗಳನ್ನು ಹೊಂದಿದ್ದಾರೆಂದು ನೆನಪಿಸಲು ನಾನು ಬಯಸುತ್ತೇನೆ ಮತ್ತು ಅಲ್ಲಿಯೇ ಅವರು ಲಸಿಕೆ ಪಡೆಯಲು ಸಾಧ್ಯವಾಗುತ್ತದೆ." ಎಂದು ಅವರು ಹೇಳಿದ್ದಾರೆ.

ಜನವರಿ 20ರಂದು ಅಧಿಕಾರ ಸ್ವೀಕರಿಸುವ ಮೂಲಕ ಕಮಲಾ ಹ್ಯಾರಿಸ್, ಅಮೆರಿಕದ ಮೊದಲ ಇಂಡೋ–ಅಮೆರಿಕನ್ ಉಪಾಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಜೊತೆಗೆ, ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT