ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸುವಂತೆ ಐಸಿಜೆ ನೀಡಿದ್ದ ಆದೇಶ ತಿರಸ್ಕರಿಸಿದ ರಷ್ಯಾ

Last Updated 17 ಮಾರ್ಚ್ 2022, 12:40 IST
ಅಕ್ಷರ ಗಾತ್ರ

ಮಾಸ್ಕೋ: ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಬುಧವಾರ ನೀಡಿದ್ದ ಆದೇಶವನ್ನು ರಷ್ಯಾ ತಿರಸ್ಕರಿಸಿದೆ.

‘ಅಂತರರಾಷ್ಟ್ರೀಯ ನ್ಯಾಯಾಲಯದ ನಿರ್ಣಯವನ್ನು ನಾವು ಪರಿಗಣಿಸುವುದಿಲ್ಲ’ಎಂದಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಎಂದಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ತೀರ್ಪನ್ನು ಜಾರಿಗೆ ತರಲು ಒಪ್ಪಿಗೆ ನೀಡಬೇಕು. ಆದರೆ,‘ಈ ಪ್ರಕರಣದಲ್ಲಿ ಯಾವುದೇ ಒಪ್ಪಿಗೆಯನ್ನು ಪಡೆಯಲಾಗುವುದಿಲ್ಲ’ಎಂದು ಪೆಸ್ಕೊವ್ ಹೇಳಿದ್ದಾರೆ.

ಫೆಬ್ರುವರಿ 24ರಿಂದ ಉಕ್ರೇನ್ ಮೇಲೆ ರಷ್ಯಾ ಆರಂಭಿಸಿರುವ ಆಕ್ರಮಣವನ್ನು ಕೂಡಲೇ ನಿಲ್ಲಿಸಬೇಕೆಂದು ಬುಧವಾರ ಅಂತರರಾಷ್ಟ್ರೀಯ ನ್ಯಾಯಾಲಯವು ಹೇಳಿತ್ತು.

ಉಕ್ರೇನ್ ಮೇಲೆ ರಷ್ಯಾ ಅಧ್ಯಕ್ಷ ಪುಟಿನ್ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಕೆಲ ದಿನಗಳ ಬಳಿಕ, ರಷ್ಯಾ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಉಕ್ರೇನ್ ಮೊಕದ್ದಮೆ ದಾಖಲಿಸಿತ್ತು.

ಇದೇ ವೇಳೆ, ಆಕ್ರಮಣಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಉಕ್ರೇನ್ ಜೊತೆ ಮಾತುಕತೆ ನಡೆದಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಬಂದಿವೆ ಎಂದು ಪೆಸ್ಕೊವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT