ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟ ಮಾಡಿಕೊಂಡು ಇಂಧನ ಮಾರಾಟ ಮಾಡುವುದಿಲ್ಲ: ರಷ್ಯಾ

Last Updated 2 ಜೂನ್ 2022, 12:56 IST
ಅಕ್ಷರ ಗಾತ್ರ

ಮಾಸ್ಕೊ: ನಷ್ಟ ಮಾಡಿಕೊಂಡು ಇಂಧನ ಮಾರಾಟ ಮಾಡುವುದಿಲ್ಲ ಎಂದುರಷ್ಯಾ ಗುರುವಾರ ಹೇಳಿದೆ.

ರಷ್ಯಾ ಆಡಳಿತ ಕಚೇರಿ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಅವರು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಬೇರೆಬೇರೆ ಪ್ರದೇಶಗಳಲ್ಲಿ ತೈಲ ಬೇಡಿಕೆ ಕುಸಿದರೆ ಮತ್ತು ಹೆಚ್ಚಾದರೆ, ಸರಬರಾಜಿನ ಬಗ್ಗೆ ಹೊಸ ನಿರ್ದೇಶನ ಹೊರಡಿಸಲಾಗುವುದು ಎಂದಿದ್ದಾರೆ.

ರಷ್ಯಾ ಸೇನೆ ಫೆಬ್ರುವರಿ 24ರಿಂದ ಉಕ್ರೇನ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನು ಖಂಡಿಸಿ ವಿಶ್ವ ಸಮುದಾಯ ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನು ಹೇರಿವೆ. ಆದರೆ,ಭಾರತಕ್ಕೆ ರಷ್ಯಾದಿಂದ ರಿಯಾಯಿತಿ ದರದಲ್ಲಿ ಇಂಧನ ಪೂರೈಕೆ ಆಗುತ್ತಿದೆ.

ಉಭಯ ರಾಷ್ಟ್ರಗಳ ನಾಯಕರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಭಾರತ, ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ನಿರ್ಣಯಗಳಿಂದ ದೂರ ಉಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT