ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ನಿಲ್ಲಿಸಲು ಉಕ್ರೇನ್‌ ಎದುರು ನಾಲ್ಕು ಬೇಡಿಕೆಗಳನ್ನಿಟ್ಟ ರಷ್ಯಾ: ಏನದು?

Last Updated 7 ಮಾರ್ಚ್ 2022, 16:36 IST
ಅಕ್ಷರ ಗಾತ್ರ

ಲಂಡನ್: ಕ್ರಿಮಿಯಾ ರಷ್ಯಾದ ಭಾಗ ಎಂದು ಒಪ್ಪುವುದು ಸೇರಿದಂತೆ ತನ್ನ ನಾಲ್ಕು ಬೇಡಿಕೆಗಳನ್ನು ಉಕ್ರೇನ್ ಒಪ್ಪಿದ ಮರುಕ್ಷಣವೇ ಆ ದೇಶದ ಮೇಲಿನ ಯುದ್ಧವನ್ನು ನಿಲ್ಲಿಸುವುದಾಗಿ ರಷ್ಯಾ ಘೋಷಣೆ ಮಾಡಿದೆ.

ಉಕ್ರೇನ್ ತನ್ನ ಸೇನಾ ಚಟುವಟಿಕೆಗಳನ್ನು ನಿಲ್ಲಿಸಬೇಕು. ನ್ಯಾಟೊ ಸೇರಿ ಯಾವುದೇ ಒಕ್ಕೂಟವನ್ನು ಉಕ್ರೇನ್ ಸೇರದಂತೆ ಸಂವಿಧಾನ ಬದಲಾವಣೆ ಹಾಗೂ ಡೊನೆಟ್‌ಸ್ಕ್ ಮತ್ತು ಲುಗಾನ್‌ಸ್ಕ್ ಪ್ರತ್ಯೇಕ ಪ್ರದೇಶಗಳನ್ನು ಸ್ವಾಯತ್ತ ಪ್ರಾಂತ್ಯಗಳೆಂದು ಗುರುತಿಸಬೇಕು ಎಂಬುದು ರಷ್ಯಾದ ಬೇಡಿಕೆಗಳಾಗಿವೆ. ಈ ಎಲ್ಲಾ ಬೇಡಿಕೆಗಳು ಈಡೇರಿದ ಮರುಕ್ಷಣವೇ ಉಕ್ರೇನ್ ಮೇಲಿನ ದಾಳಿ ನಿಲ್ಲಲಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಹೇಳಿದ್ದಾರೆ.

ಈ ಬಗ್ಗೆ ಸೋಮವಾರ ರಾಯಿಟರ್ಸ್ ಸುದ್ದಿಸಂಸ್ಥೆ ಜತೆ ಮಾತನಾಡಿದ ಪೆಸ್ಕೋವ್ ಅವರು, "ನಮ್ಮ ಬೇಡಿಕೆಗಳಿಗೆ ಒಪ್ಪಿದ ಮರುಕ್ಷಣವೇ ನಮ್ಮ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದ್ದೇವೆ ಎಂಬ ಸಂದೇಶವನ್ನು ಉಕ್ರೇನ್‌ಗೆ ನೀಡಿದ್ದೇವೆ. ಈ ನಮ್ಮ ಷರತ್ತುಗಳು ಏನು ಎಂಬುದು ಉಕ್ರೇನ್‌ಗೆ ಚೆನ್ನಾಗಿ ಗೊತ್ತಿದೆ. ನ್ಯಾಟೊ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಉಕ್ರೇನ್ ಸೇರಬಾರದು. ಇದಕ್ಕಾಗಿ ಉಕ್ರೇನ್ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು. ಜೊತೆಗೆ ಮೊದಲು ಉಕ್ರೇನ್ ಯೋಧರು ಯುದ್ಧವನ್ನು ನಿಲ್ಲಿಸಬೇಕು. ಆಗ ಯಾರೂ ಸಹ ಅವರ ಮೇಲೆ ದಾಳಿ ನಡೆಸುವುದಿಲ್ಲ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT