ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮಾಹಿತಿ ಹಂಚಿಕೊಳ್ಳದ ಚೀನಾ: ವಿಶ್ವ ಸಮುದಾಯ ಕಳವಳ

Last Updated 29 ಡಿಸೆಂಬರ್ 2022, 12:33 IST
ಅಕ್ಷರ ಗಾತ್ರ

ಬೀಜಿಂಗ್‌: ಅಮೆರಿಕ, ಜಪಾನ್‌ ಸೇರಿ ಅನೇಕ ದೇಶಗಳು ಚೀನಾದಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಿವೆ. ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿದ್ದರೂ ಕೂಡ ಚೀನಾ ಇತರ ದೇಶಗಳೊಂದಿಗೆ ಸರಿಯಾದ ಮಾಹಿತಿಯನ್ನು ಹಂಚಿಕೊಳ್ಳದೇ ಇರುವುದಕ್ಕೆ ಜಾಗತಿಕ ಸಮುದಾಯ ಕಳವಳ ವ್ಯಕ್ತಪಡಿಸಿದೆ.

ಈವರೆಗೆ ಚೀನಾ ಹೊಸ ತಳಿಯ ವೈರಾಣು ಸೋಂಕಿನ ಬಗ್ಗೆಯಾಗಲಿ, ಸೋಂಕಿನ ಲಕ್ಷಣಗಳ ಕುರಿತಾಗಲಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಹೀಗಾಗಿ ಕೋವಿಡ್‌ ಪಿಡುಗಿನ ಸ್ಥಿತಿಗತಿಯ ಸ್ಪಷ್ಟತೆ ಸಿಗದೆ ಜಗತ್ತಿನ ಅನೇಕ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.

ಹೊಸ ವರ್ಷದ ಆಚರಣೆಯ ಹಿನ್ನಲೆಯಲ್ಲ್ಲಿ 30 ಸಾವಿರ ತೈವಾನ್‌ ಪ್ರಜೆಗಳು ದೇಶಕ್ಕೆ ವಾಪಸ್ಸಾಗುವ ನಿರೀಕ್ಷೆಯಿದ್ದು, ಚೀನಾದಿಂದ ಆಗಮಿಸುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕು.ಸದ್ಯ ಚೀನಾದಲ್ಲಿ ಕೋವಿಡ್‌–19 ಪ್ರಸರಣ ಯಾವ ಹಂತದಲ್ಲಿದೆ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ, ಇರುವ ಅಲ್ಪ ಮಾಹಿತಿಯೂ ಸ್ಪಷ್ಟವಾಗಿಲ್ಲ ಎಂದು ತೈವಾನ್‌ನ ಸಾಂಕ್ರಾಮಿಕ ನಿರ್ವಹಣಾ ಕೇಂದ್ರದ ಮುಖ್ಯಸ್ಥ ವಾಂಗ್‌ ಪೈ–ಶೆಂಗ್‌ ಗುರುವಾರ ತಿಳಿಸಿದ್ದಾರೆ.

ಭಾರತ, ದಕ್ಷಿಣ ಆಫ್ರಿಕಾ, ತೈವಾನ್‌ ಮತ್ತು ಇಟಲಿ, ಈಗಾಗಲೇ ಚೀನಾದಿಂದ ಆಗಮಿಸುವವರನ್ನು ಪರೀಕ್ಷೆಗೆ ಒಳಪಡಿಸುವುದಾಗಿ ಹೇಳಿವೆ. ಜರ್ಮನ್‌ ಸರ್ಕಾರ ಮಾತ್ರ ಪರಿಸ್ಥಿತಿಯನ್ನು ಇನ್ನೂ ಅವಲೋಕಿಸುತ್ತಿದ್ದು, ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT