ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝೆಲೆನ್‌ಸ್ಕಿ ಪದಚ್ಯುತಿ ರಷ್ಯಾ ಗುರಿ: ಲಾವ್ರೊವ್

Last Updated 25 ಜುಲೈ 2022, 14:29 IST
ಅಕ್ಷರ ಗಾತ್ರ

ಕೀವ್‌:ಉಕ್ರೇನಿನ ನಗರಗಳೆಲ್ಲವನ್ನೂ ಸ್ಮಶಾನ ಸದೃಶ್ಯಗೊಳಿಸುವ ರೀತಿಯಲ್ಲಿ ಫಿರಂಗಿ ಮತ್ತು ವಾಯುದಾಳಿಯನ್ನು ರಷ್ಯಾ ಪಡೆಗಳು ನಿರಂತರ ಮುಂದುವರಿಸಿರುವ ಬೆನ್ನಲೇ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ‘ಉಕ್ರೇನ್‌ ಅಧ್ಯಕ್ಷ ಸ್ಥಾನದಿಂದ ವೊಲೊಡಿಮಿರ್‌ ಝೆಲೆನ್‌ಸ್ಕಿಯನ್ನು ಕಿತ್ತೊಗೆಯುವುದೇ ಪ್ರಮುಖ ಗುರಿ’ ಎಂದು ಹೇಳಿದ್ದಾರೆ.

ಜಾಗತಿಕ ಆಹಾರ ಬಿಕ್ಕಟ್ಟು ಬಗೆಹರಿಸಲು ಉಕ್ರೇನ್‌ ಕಪ್ಪು ಸಮುದ್ರ ಬಂದರಿನಿಂದ ಧಾನ್ಯಗಳ ರಫ್ತು ಪುನರಾರಂಭಿಸುವ ಪ್ರಯತ್ನಗಳನ್ನು ನಡೆಸುತ್ತಿರುವ ನಡುವೆ ಅವರು ಈ ಹೇಳಿಕೆ ನೀಡಿದ್ದಾರೆ.

ಕೈರೋದಲ್ಲಿ ಭಾನುವಾರ ನಡೆದ ಅರಬ್ ಲೀಗ್ ಶೃಂಗಸಭೆಯಲ್ಲಿ ರಾಯಭಾರಿಗಳ ಜತೆ ಮಾತನಾಡಿದ ಲಾವ್ರೊವ್, ‘ಸ್ವೀಕಾರಾರ್ಹವಲ್ಲದಈ ಆಡಳಿತದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾಸ್ಕೊ ನಿರ್ಧರಿಸಿದೆ’ ಎಂದು ತಿಳಿಸಿದ್ದಾರೆ.

‘ರಷ್ಯಾ ವಿರುದ್ಧ ಉಕ್ರೇನ್‌ ಮತ್ತು ಅದರ ಮಿತ್ರರಾಷ್ಟ್ರಗಳು ಅಪಪ್ರಚಾರದಲ್ಲಿ ತೊಡಗಿವೆ.ಯುದ್ಧಭೂಮಿಯಲ್ಲಿ ರಷ್ಯಾವನ್ನು ಸೋಲಿಸುವವರೆಗೂ ಮಾತುಕತೆ ಆರಂಭಿಸಬಾರದೆಂದು ಪಶ್ಚಿಮ ದೇಶಗಳು ಉಕ್ರೇನ್ ಮೇಲೆ ಒತ್ತಡ ಹೇರಿವೆ’ ಎಂದು ಲಾವ್ರೊವ್ ದೂರಿದರು.

‘ರಷ್ಯಾ ಮತ್ತು ಉಕ್ರೇನ್‌ ಜನರು ಒಟ್ಟಿಗೆ ಬದುಕುವುದನ್ನು ಮುಂದುವರಿಸುತ್ತೇವೆ. ಉಕ್ರೇನಿನಲ್ಲಿರುವ ಜನವಿರೋಧಿ ಮತ್ತು ಇತಿಹಾಸ ವಿರೋಧಿ ಆಡಳಿತದಿಂದಸಂಪೂರ್ಣ ಹೊರಬರಲು ನಾವು ಖಂಡಿತವಾಗಿಯೂಉಕ್ರೇನಿಗರಿಗೆ ಸಹಾಯ ಮಾಡುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT