ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈರೊ: ಲಿಬಿಯಾ ಸರ್ವಾಧಿಕಾರಿಯಾಗಿದ್ದ ಗಡಾಫಿ ಪುತ್ರ ಏಳು ವರ್ಷಗಳ ನಂತರ ಬಿಡುಗಡೆ

Last Updated 6 ಸೆಪ್ಟೆಂಬರ್ 2021, 6:10 IST
ಅಕ್ಷರ ಗಾತ್ರ

ಕೈರೊ: ತನ್ನ ತಂದೆಯ ಆಡಳಿತದ ವಿರುದ್ಧ ದಂಗೆ ಎದ್ದ ಆರೋಪದ ಮೇಲೆ ಏಳು ವರ್ಷಗಳ ಹಿಂದೆ ನೈಜೀರಿಯಾದಿಂದ ಗಡಿಪಾರಾಗಿ, ಟ್ರಿಪೋಲಿಯಲ್ಲಿ ಬಂಧನಕ್ಕೊಳಗಾಗಿದ್ದ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರ ಪುತ್ರ ಅಲ್‌–ಸಾದಿ ಗಡಾಫಿಯನ್ನು ಭಾನುವಾರ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

ನ್ಯಾಯಾಲಯದ ಆದೇಶದ ಅನುಸಾರ ಅಲ್-ಸಾದಿ ಗಢಾಫಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ನಿಯೋಜಿತ ಪ್ರಧಾನಿ ಅಬ್ದುಲ್ ಹಮೀದ್ ಸೋಮವಾರ ಮುಂಜಾನೆ ಟ್ವೀಟ್‌ ಮಾಡಿದ್ದಾರೆ.

ಸರ್ಕಾರದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ವಕ್ತಾರ ಮೊಹಮ್ಮದ್‌ ಹಮೌದಾ, ‘ಅಲ್‌–ಸಾದಿ ಗಢಾಪಿಯನ್ನು ರಾಜಧಾನಿ ಟ್ರಿಪೊಲಿಯ ಅಲ್‌–ಹದಬ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 2011ರ ದಂಗೆಯ ವೇಳೆ ಬಂಧಿತರಾಗಿರುವ ಗಡಾಫಿ ಆಡಳಿತದ ಅನೇಕ ಅಧಿಕಾರಿಗಳು ಇನ್ನೂ ಜೈಲಿನಲ್ಲೇ ಇದ್ದಾರೆ‘ ಎಂದು ಹೇಳಿದರು. ಗಡಾಫಿ ಹತ್ಯೆ ಮತ್ತು ಪುತ್ರ ಬಿಡುಗಡೆಯ ಸಂದರ್ಭಗಳ ಕುರಿತು ಹಮೌದಾ ಹೆಚ್ಚಿನ ಮಾಹಿತಿ ನೀಡಿಲ್ಲ.

‘ತನ್ನ ತಂದೆಯ ಆಡಳಿತದ ವಿರುದ್ಧ ದಂಗೆ ನಡೆಸಿದ್ದ ಆರೋಪದಲ್ಲಿ ಅಲ್ –ಸಾದಿ ಗಡಾಫಿಯನ್ನು ಬಂಧಿಸಲಾಗಿತ್ತು. ಈ ಆರೋಪದಿಂದ ಮುಕ್ತಗೊಳಿಸಿದ ನಂತರ ಇವರನ್ನು ಬಿಡುಗಡೆ ಮಾಡಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ‘ಸಾದಿ ಗಡಾಫಿ ಬಿಡುಗಡೆಯಾದ ನಂತರ, ಟರ್ಕಿಗೆ ಪ್ರಯಾಣಿಸಿದರು‘ ಎಂದು ಅಲ್-ಮರ್ಸಾದ್ ನ್ಯೂಸ್ ವೆಬ್‌ಸೈಟ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT