ಮಂಗಳವಾರ, ಅಕ್ಟೋಬರ್ 20, 2020
23 °C

ಚೀನಾ: ಶೀತಲೀಕರಿಸಿದ ಆಹಾರ ಪೊಟ್ಟಣದ ಮೇಲೆ ಜೀವಂತ ಕೊರೊನಾ ವೈರಸ್‌ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಆಮದು ಮಾಡಿಕೊಳ್ಳಲಾದ, ಶೀತಲೀಕರಿಸಿದ ಮೀನಿನ ಪೊಟ್ಟಣದ ಮೇಲೆ ಜೀವಂತ ಕೊರೊನಾ ವೈರಸ್‌ ಪತ್ತೆಯಾಗಿರುವುದನ್ನು ಚೀನಾ ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

ಬಂದರು ನಗರ ಚಿಂಗ್‌ದಾವ್‌ನಲ್ಲಿ ಈ ವೈರಸ್‌ ಪತ್ತೆಯಾಗಿದೆ. ಈ ಸೋಂಕು ಕಾಣಿಸಿಕೊಂಡ ನಂತರ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಶೀತಲೀಕರಿಸಿದ ಆಹಾರದ ಪೊಟ್ಟಣದ ಮೇಲೆ ಜೀವಂತ ವೈರಸ್ಅನ್ನು ಪತ್ತೆ ಹಚ್ಚಿ, ಪ್ರತ್ಯೇಕಿಸಲಾಗಿದೆ ಎಂದು ಸೆಂಟರ್‌ ಫಾರ್‌ ಡಿಸೀಜ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಷನ್ (ಸಿಡಿಸಿ) ಪ್ರಕಟಣೆ ತಿಳಿಸಿದೆ.

ಚಿಂಗ್‌ದಾವ್‌ ನಗರದಲ್ಲಿ ಇತ್ತೀಚೆಗೆ ಹೊಸದಾಗಿ ಕೋವಿಡ್‌ ಪ್ರಕರಣಗಳು ವರದಿಯಾಗಿ ಆತಂಕಕ್ಕೆ ಕಾರಣವಾಗಿತ್ತು. ಇದಾದ ನಂತರ ನಗರದ 1.10 ಕೋಟಿ ಜನರಿಗೆ ಪರೀಕ್ಷೆ ನಡೆಸಲಾಯಿತು. ಸೋಂಕಿನ ಮೂಲವನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾದರು.

ಆಮದು ಮಾಡಿಕೊಂಡಿದ್ದ ಮೀನಿನ ಪೊಟ್ಟಣಗಳು ಸೋಂಕಿಗೆ ಒಳಗಾಗಿದ್ದವು ಎಂಬುದು ಪರೀಕ್ಷೆಯಿಂದ ದೃಢಪಟ್ಟಿತು ಎಂಬ ಸಿಡಿಸಿ ಪ್ರಕಟಣೆ ಉಲ್ಲೇಖಿಸಿ ಸರ್ಕಾರ ಒಡೆತನದ ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಯಾವ ದೇಶಗಳಿಂದ ಈ ಶೀತಲೀಕರಿಸಿದ ಆಹಾರ ಪೊಟ್ಟಣಗಳನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂಬ ಬಗ್ಗೆ ಸಿಡಿಸಿ ಮಾಹಿತಿ ನೀಡಿಲ್ಲ ಎಂದೂ ಸುದ್ದಿಸಂಸ್ಥೆ ಹೇಳಿದೆ.

6.7 ಲಕ್ಷ ಶೀತಲೀಕರಿಸಿದ ಆಹಾರ ಪೊಟ್ಟಣಗಳಿಂದಲೂ ಸೇರಿದಂತೆ ಚೀನಾದ 24 ಪ್ರಾಂತ್ಯಗಳಿಂದ ಒಟ್ಟು 29 ಲಕ್ಷ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಶೀತಲೀಕರಿಸಿದ ಆಹಾರ ಇರುವ ಪೊಟ್ಟಣಗಳಿಂದ ಸಂಗ್ರಹಿಸಿದ್ದ 22 ಮಾದರಿಗಳಲ್ಲಿ ಮಾತ್ರ ಕೊರೊನಾ ಪಾಸಿಟಿವ್‌ ದೃಢಪಟ್ಟಿತ್ತು ಎಂದು ಸಿಡಿಸಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು